ಕಾರವಾರ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಉದ್ಯೋಗವೊಂದು ಖಾಲಿಯಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸದ್ಯ ಇಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಯೋಗ್ಯರ ಹುಡುಕಾಟ ನಡೆದಿದೆ.
ಅಭ್ಯರ್ಥಿಗಳು ಬಿ.ಕಾಂ ಪಾಸ್ ಆಗಿರಬೇಕು. ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆಹೊಂದಿರಬೇಕು ಎಂಬ ನಿಯಮವಿದೆ. ಜೊತೆಗೆ ಇಂಗ್ಲಿಷ್ ಬರಬೇಕು. ಸಾಮಾನ್ಯ ಜ್ಞಾನ ಪರೀಕ್ಷೆ ಎದುರಿಸಿರಬೇಕು. ನಿಮಿಷಕ್ಕೆ ಕನಿಷ್ಠ 30 ಪದಗಳ ಟೈಪಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ಸೂಚನೆಯಿದೆ. ಕನ್ನಡ ಟೈಪಿಂಗ್ ಜ್ಞಾನ, ಎಂಎಸ್ ವರ್ಡ್ ಅಪ್ಲಿಕೇಶನ್ ಮತ್ತು ಟ್ಯಾಲಿ ಗೊತ್ತಿದ್ದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಹುದ್ದೆಯ ನೇಮಕಾತಿಯು ತಾತ್ಕಾಲಿಕ ಆಧಾರದಲ್ಲಿರುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ವಿವರಗಳನ್ನು ಮತ್ತು ಎಲ್ಲಾ ಅಗತ್ಯ ದಾಖಲೆಗಳ ದೃಢೀಕೃತ ಪ್ರತಿಗಳೊಂದಿಗೆ ಅರ್ಜಿಗಳನ್ನು ಕಚೇರಿಯ ವಿ¼ ಕಳುಹಿಸಬೇಕು. ನೋಂದಾಯಿತ ಅಂಚೆ ಅಥವಾ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು “ಅಧ್ಯಕ್ಷರು, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ”, ಕೈಗಾ ನಿಲಯ, ಕೋಡಿಬಾಗ್, ಕಾರವಾರ- 581303 ವಿಳಾಸದಲ್ಲಿ ಸ್ವೀಕರಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಡಿಸೆಂಬರ್ 3 ಕೊನೆ ದಿನ. ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಇನ್ನೂ ಅಧಿಕ ಮಾಹಿತಿಗೆ ಇಲ್ಲಿ ಫೋನ್ ಮಾಡಿ: 08382 295540