ಕಾರವಾರ-ಗೋವಾ ಗಡಿ ಭಾಗದ ಕಾಡು ಪ್ರದೇಶ ಮೈಂಗಿಣಿಗೆ ಹೋಗಿದ್ದ ಚಿತ್ತಾಕುಲ ಪಿಸೈ ಪರಶುರಾಮ ಮಿರ್ಜಗಿ ಅವರು ಆ ದಾರಿಯಲ್ಲಿ ಸರಾಯಿ ಹೊತ್ತು ತರುತ್ತಿದ್ ಸಮೀರ್ ಮಾಳಸೇಕರ್ ಅವರನ್ನು ಹಿಡಿದಿದ್ದಾರೆ. 63ಸಾವಿರ ರೂ ಮೌಲ್ಯದ 363 ಬಾಟಲಿ ಸರಾಯಿ ಸಾಗಿಸುತ್ತಿದ್ದ ಸಮೀರ ಮಾಳಸೇಕರ್ ಅವರು ಸಿಕ್ಕಿಬಿದ್ದಿದ್ದಾರೆ.
ನವೆಂಬರ್ 28ರಂದು ಬೆಳಿಗ್ಗೆ ಮೈಂಗಿಣಿ ಅರಣ್ಯ ಪ್ರದೇಶದ ಮೂಲಕ ಕರ್ನಾಟಕಕ್ಕೆ ಸರಾಯಿ ಸಾಗಾಟ ನಡೆದಿತ್ತು. ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ ಸರಾಯಿಯನ್ನು ಅಕ್ರಮವಾಗಿ ಕಾರವಾರಕ್ಕೆ ತರಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಅರಿತ ಪಿಸೈ ಪರಶುರಾಮ ಮಿರ್ಜಗಿ ಅವರು ತಮ್ಮ ತಂಡದೊAದಿಗೆ ಕಾಡು ಪ್ರವೇಶಿಸಿದರು. 7.30ರವರೆಗೆ ಕಾದ ಅವರು ಹೋಟೆಗಾಳಿಯ ಸಮೀರ್ ಸಂಜಯ ಮಾಳಸೇಕರ್ ಅವರನ್ನು ಹಿಡಿದರು.
ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸರಾಯಿ ಹೊತ್ತು ತಂದಿದ್ದ ಸಮೀರ ಮಾಳಸೇಕರ್ ಅವರ ಬಳಿ 363 ಬಾಟಲಿಗಳಿದ್ದವು. ಅದನ್ನು ಪೊಲೀಸರು ವಶಕ್ಕೆಪಡೆದು, ಕೇಸು ದಾಖಲಿಸಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಕಾರವಾರ ಉಪವಿಭಾಗದ ಡಿವೈಎಸ್ಪಿ ಜಿ ಎಸ್ ಲೋಕಾಪುರ ಹಾಗೂ ಕದ್ರಾ ವೃತ್ತದ ಸಿಪಿಐ ಪ್ರಭಾಕರ ಧರ್ಮಟ್ಟಿ ಅವರ ಸೂಚನೆ ಮೇರೆಗೆ ಎಸೈ ಸಂತೋಷ ನಾಯ್ಕ, ಪೊಲೀಸ್ ಸಿಬ್ಬಂದಿ ಖಲಂದರ ಡಾಲಾಯತ್, ಗೌತಮ ರೊಡ್ಡನವರ ಮತ್ತು ಅರ್ಜುನ ದೇಸಾಯಿ ಅವರು ಕಾರ್ಯಾಚರಣೆಯಲ್ಲಿ ಭಾಗಿ ಆಗಿದ್ದರು.