ಹಳಿಯಾಳದ ಗೋಪಾಲ ಕಮ್ಮಾರ್ ಅವರ ಜೀಪನ್ನು ಮಂಜು ಕಮ್ಮಾರ್ ಅವರು ಓಡಿಸಿಕೊಂಡು ಹೋಗಿದ್ದು, ಕೆಕೆ ಹಳ್ಳಿ ಸಮೀಪದ ನಾಗಶೆಟ್ಟಿಕೊಪ್ಪದ ಹತ್ತಿರ ಆ ಜೀಪು ಪಲ್ಟಿಯಾಗಿದೆ. ಪರಿಣಾಮ, ಜೀಪಿನಲ್ಲಿದ್ದ ದಿನೇಶ ಕಮ್ಮಾರ್ ಅವರು ಅಲ್ಲಿಯೇ ಸಾವನಪ್ಪಿದ್ದಾರೆ.
ಹಳಿಯಾಳದ ಕಾರ್ಪರೆಂಟರ್ ಗೋಪಾಲ ಸದಾನಂದ ಕಮ್ಮಾರ್ ಅವರು ಬುಲೇರೋ ಜೀಪ್ ಹೊಂದಿದ್ದಾರೆ. ಸದ್ಯ ಹಳಿಯಾಳದಲ್ಲಿ ಗ್ಯಾರೇಜ್ ವೆಲ್ಡಿಂಗ್ ಕೆಲಸ ಮಾಡುವ ಬೆಳಗಾವಿಯ ಗಣೇಶ @ ಮಂಜು ಬಸವರಾಜ ಕಮ್ಮಾರ್ ಅವರು ನವೆಂಬರ್ 27ರಂದು ಆ ಜೀಪನ್ನು ಓಡಿಸಿದ್ದಾರೆ. ನವೆಂಬರ್ 28ರ ನಸುಕಿನ 12.50ಕ್ಕೆ ಈ ಅವರು ಆ ಜೀಪನ್ನು ಪಲ್ಟಿ ಮಾಡಿದ್ದಾರೆ. ಮಹೇಂದ್ರ ಬುಲೋರೋದಲ್ಲಿ ದಿನೇಶ ಶೇಖರಪ್ಪ ಕಮ್ಮಾರ್ ಅವರು ಆಸೀನರಾಗಿದ್ದು, ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ.
ಆ ಜೀಪು ನಿಚನಕಿಯಿಂದ ಹಳಿಯಾಳ ಕಲಘಟಕಿ ಮಾರ್ಗವಾಗಿ ಸಂಚಾರ ಮಾಡಿದ್ದು, ಕೆಕೆ ಹಳ್ಳಿಗೆ ಬರುವಾಗ ನಾಗಶೆಟ್ಟಿಕೊಪ್ಪದ ವಸಂತ ಫಕ್ಕೀರಗೌಡ ಪಾಟೀಲ್ ಅವರ ರೇಶ್ಮೆಗೂಡಿನ ಮನೆಯ ಬಳಿ ಅಪಘಾತವಾಗಿದೆ. ರಸ್ತೆ ತಿರುವಿನಲ್ಲಿ ಜೀಪು ನಿಯಂತ್ರಣ ತಪ್ಪಿ ಹೊಲಕ್ಕೆ ಹೋಗಿ ಬಿದ್ದಿದೆ. ದಿನೇಶ ಕಮ್ಮಾರ್ ಅವರು ಸಾವನಪ್ಪಿರುವುದನ್ನು ನೋಡಿದ ಮಂಜು ಕಮ್ಮಾರ್ ಅವರು ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಮಂಜು ಕಮ್ಮಾರ್ ಅವರಿಗೂ ಅಪಘಾತದಲ್ಲಿ ಗಾಯವಾಗಿದ್ದು, ಹೊಲದಲ್ಲಿ ಜೀಪು ಬಿದ್ದಿರುವುದನ್ನು ನೋಡಿದ ಜನ ಗೋಪಾಲ ಕಮ್ಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.