ಶಿರಸಿ-ಕುಮಟಾ ಹೆದ್ದಾರಿ ಬಂದ್ ಆದ ಪರಿಣಾಮ ಭಾರೀ ಗಾತ್ರದ ಟಿಪ್ಪರ್ ಹಾಗೂ ಲಾರಿಗಳು ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಸಂಚರಿಸುತ್ತಿದೆ. ಹೀಗಾಗಿ ವಾರದ ಏಳು ದಿನ ಶಿರಸಿ RTO ಮಲ್ಲಿಕಾರ್ಜುನ ಕೊಪ್ಪದ ಅವರು ಯಲ್ಲಾಪುರಕ್ಕೆ ಬಂದಿದ್ದು, ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ವಾಹನ ನಿಲ್ಲಿಸಿ ವಸೂಲಿ ನಡೆಸುತ್ತಿದ್ದಾರೆ. ಎಲ್ಲಾ ದಾಖಲೆ ಸರಿಯಿದ್ದರೂ ಹಣ ವಸೂಲಿ ಮಾಡಿದ ಕಾರಣ ಲಾರಿ ಚಾಲಕ ಹಾಗೂ ಮಾಲಕರು ಗಲಾಟೆ ಮಾಡಿದ್ದಾರೆ!
ADVERTISEMENT
ಕಳೆದ ಎರಡು ತಿಂಗಳಿನಿOದ ಶಿರಸಿ RTO ಮಲ್ಲಿಕಾರ್ಜುನ ಕೊಪ್ಪದ ಅವರು ತಮ್ಮ ಮೂವರು ಸಿಬ್ಬಂದಿ ಜೊತೆ ಯಲ್ಲಾಪುರಕ್ಕೆ ಬರುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿಗಳಿಗೆ ಅಡ್ಡಲಾಗಿ ಕೈ ಮಾಡುವ ಅವರು ತಪಾಸಣೆ ನೆಪದಲ್ಲಿ ಅವರನ್ನು ಕಾಡಿಸುತ್ತಿದ್ದಾರೆ. ನಿಲ್ಲಿಸಿದ ಎಲ್ಲಾ ಗಾಡಿಯವರಿಂದಲೂ ಕಡ್ಡಾಯವಾಗಿ 500 ರೂ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡದಿದ್ದರೆ ಅನಗತ್ಯ ಕೇಸು ದಾಖಲಿಸಿ ಕೋರ್ಟು-ಕಚೇರಿ ಅಲೆದಾಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಉತ್ತರ ಕನ್ನಡ ಲಾರಿ ಮಾಲಕರ ಸಂಘದವರು ದೂರಿದ್ದು, ಭಾನುವಾರ RTO ನಡೆ ವಿರೋಧಿಸಿ ಮಲ್ಲಿಕಾರ್ಜುನ ಕೊಪ್ಪದ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ADVERTISEMENT
ಯಲ್ಲಾಪುರದ ಮಾಗೋಡು ಕ್ರಾಸಿನ ಬಳಿ ಭಾನುವಾರ 2ಕಿಮೀ ಉದ್ದಕ್ಕೆ ವಾಹನಗಳು ನಿಂತಿದ್ದವು. ಪೊಲೀಸರು ವಾಹನ ಸಂಚಾರ ಸರಿಪಡಿಸಲು ಹರಸಾಹಸ ಮಾಡಿದರು. ಆದರೆ, ಅಲ್ಲಿದ್ದ RTO ಅಧಿಕಾರಿಗಳು ವಾಹನ ಸಂಚಾರವನ್ನು ಇನ್ನಷ್ಟು ನಿಧಾನಗೊಳಿಸುತ್ತಿದ್ದರು. ಅತಿ ಬಾರ ಇಲ್ಲದ ಲಾರಿಗಳನ್ನು ಹಿಡಿದು ಅದಕ್ಕೆ ದಂಡ ವಸೂಲಿ ಮಾಡುವ ಬಗ್ಗೆ ಹೆದರಿಸುತ್ತಿದ್ದರು. ತೆರಿಗೆ ಪಾವತಿ ಸರಿಯಾಗಿದ್ದ ಲಾರಿ ಚಾಲಕರೊಬ್ಬರು ದಾಖಲೆ ನೀಡಿದರೂ ತೆರಿಗೆ ಪಾವತಿ ಆಗಿಲ್ಲ ಎಂಬ ಕಾರಣ ನೀಡಿ ದಂಡ ವಸೂಲಿ ಮಾಡಿದ್ದರು.
ADVERTISEMENT
RTO ಅಧಿಕಾರಿಗಳ ಉಪಟಳ ಸಹಿಸದ ಉತ್ತರ ಕನ್ನಡ ಲಾರಿ ಮಾಲಕರ ಸಂಘದವರು ಅವರ ಮಲ್ಲಿಕಾರ್ಜುನ ಕೊಪ್ಪದ ಅವರ ವಾಹನಕ್ಕೆ ಮುತ್ತಿಗೆ ಹಾಕಿದರು. ಸರ್ಕಾರಿ ಅಧಿಕಾರಿ ಬಳಿ ಕಾನೂನಾತ್ಮಕ ರೀತಿ ಪ್ರಶ್ನೆ ಕೇಳಿದರು. `ಸರ್ಕಾರಿ ಅಧಿಕಾರಿಗಳು ಕಚೇರಿಯಿಂದ ಹೊರಗಡೆ ಕರ್ತವ್ಯಕ್ಕೆ ಹೋಗುವ ಮುನ್ನ ರಿಜಿಸ್ಟರ್ ಪುಸ್ತಕದಲ್ಲಿ ಮಾಹಿತಿ ನಮೂದಿಸಬೇಕಿದ್ದು, ಕಚೇರಿಯೇ ತೆರೆಯದ ಭಾನುವಾರ ಇಲ್ಲಿ ಹೇಗೆ ಬಂದಿರಿ?’ ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಲಾಗದೇ ಅಧಿಕಾರಿಗಳು ದಬ್ಬಿಬ್ಬಾದರು. ಆರ್ ಟಿ ಓ ಕಚೇರಿ ವಾಹನ ಚಾಲಕ ಈ ಎಲ್ಲಾ ವಿದ್ಯಮಾನಗಳ ವಿಡಿಯೋ ಮಾಡಿದ್ದು, ಲಾರಿ ಮಾಲಕ ಸಂಘದವರು ಸಹ ಘಟನಾವಳಿಗಳ ವಿಡಿಯೋ ಮಾಡಿದರು.
ಅನಗತ್ಯವಾಗಿ ಆರ್ ಟಿ ಓ ಕಾಡಿಸಿದ ಬಗ್ಗೆ ಹೊರ ಜಿಲ್ಲೆಯ ಲಾರಿ ಚಾಲಕರು ದೂರಿದರು. ಲಾರಿ ಮಾಲಕರ ಸಂಘದ ರಾಜ್ಯ ಉಪಾಧ್ಯಕ್ಷ ಗಿರೀಶ ಮಲ್ನಾಡ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಲಾರಿ ಮಾಲಕರ ಸಂಘದ ಉಪಾಧ್ಯಕ್ಷ ಸುಜಯ ಮರಾಠಿ ಫೋನ್ ಮಾಡಿದರು. ಆರ್ ಟಿ ಓ ದಬ್ಬಾಳಿಕೆ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ಲಾರಿ ಮಾಲಕರ ಸಂಘದವರು ಘೋಷಿಸಿದರು. ಹೊನ್ನಾವರದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಿದ್ದಾರ್ಥ ಕಾಮತ್, ಸಂಘಟನೆ ಸದಸ್ಯರಾದ ಮಹೇಶ್ ನಾಯ್ಕ, ಖಾಜಾ ಅತ್ತಾರ, ಮುರಳಿ ರಾವಲ್, ವರುಣ್ ನಾಯಕ, ಮುಜೀಮ್ ತೊಲಗಿ, ಆದಮ ಶೇಖ ಹಜಿಮ್ ಇತರರು ಆರ್ ಟಿ ಓ ನಡೆ ಖಂಡಿಸಿದರು. ವಸೂಲಿಗೆ ಬಂದ ಆರ್ ಟಿ ಓಗೆ ಛೀಮಾರಿ ಹಾಕಿದ ವಿಡಿಯೋ ಇಲ್ಲಿ ನೋಡಿ..