ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಜೊಯಿಡಾದ ರಾಮನಗರ ಹಾಗೂ ಬೆಳಗಾವಿಯ ಖಾನಾಪುರದ ನಡುವಿನ ಪ್ರದೇಶದಲ್ಲಿ ಎರಡು ಆನೆ ಸಾವನಪ್ಪಿದೆ. ವಿದ್ಯುತ್ ಸ್ಪರ್ಶದಿಂದ ಆನೆ ಸಾವನಪ್ಪಿರುವ ಬಗ್ಗೆ ಅಂದಾಜಿಸಲಾಗಿದೆ.
ಭಾನುವಾರ ಬೆಳಗ್ಗೆ ಇಲ್ಲಿನ ಭತ್ತದ ಗದ್ದೆಯಲ್ಲಿ ಎರಡು ಆನೆ ಸಾವನಪ್ಪಿರುವುದು ಗೊತ್ತಾಗಿದೆ. ಸುಲೇಗಾಳಿ ಗ್ರಾಮದ ರೈತ ಗಣಪತಿ ಗುರವ ಅವರ ಹೊಲದಲ್ಲಿ ಆನೆ ಶವ ಕಾಣಿಸಿದೆ. ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಹಾಕಿದ್ದ ಬೇಲಿಯಲ್ಲಿ ವಿದ್ಯುತ್ ಪ್ರವಹಿಸಿ ಆನೆ ಸಾವನಪ್ಪಿರುವ ಬಗ್ಗೆ ಹೇಳಲಾಗಿದೆ.
ಆಹಾರ ಅರೆಸಿ ಊರಿಗೆ ಬಂದ ಆನೆಗಳೆರಡು ವಿದ್ಯುತ್ ತಂತಿ ಸ್ಪರ್ಶಿಸಿ ಅಲ್ಲಿ ಕುಸಿದು ಬಿದ್ದಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಆನೆ ಸತ್ತ ಸುದ್ದಿ ಕೇಳಿ ನೂರಾರು ಜನ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಖಾನಾಪುರದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ.
`ವಿದ್ಯುತ್ ತಂತಿ ಮುರಿದು ಬೇಲಿ ಮೇಲೆ ಬಿದ್ದಿದ್ದರಿಂದ ಆನೆ ಸಾವನಪ್ಪಿಲ್ಲ’ ಎಂದು ಹೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ. ರೈತನ ಗುಡಿಸಿಲಿನಿಂದ ವಿದ್ಯುತ್ ಹೋಗಿರುವ ಸಾಧ್ಯತೆಯಿರುವ ಬಗ್ಗೆ ಅವರು ಅಂದಾಜಿಸಿದ್ದಾರೆ.
You cannot copy content of this page