ಅಪಾರ ಪ್ರಮಾಣದಲ್ಲಿ ವನ್ಯ ಸಂಪತ್ತು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಷ್ಟೇ ಪ್ರಮಾಣದ ಜೀವ ಪ್ರಪಂಚವಿದೆ. ಸದ್ಯ ದಾಂಡೇಲಿ ಗಣೇಶಗುಡಿಯ ಬಳಿ ವಿಚಿತ್ರ ಪ್ರಾಣಿಯೊಂದು ಕಾಣಿಸಿದೆ.
ADVERTISEMENT
ಬೆಕ್ಕಿನ ಸ್ವಭಾವ, ನಾಯಿಗಳ ಹೋಲಿಕೆಯಿರುವ ಅಪರೂಪದ `ಹೈನಾ’ ಎಂಬ ಪ್ರಾಣಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಾಣಿಸಿದೆ. ಗಣೇಶಗುಡಿಯಲ್ಲಿ ಮಂಗಳವಾರ ರಾತ್ರಿ ಅಪರೂಪದ ಹೈನಾ ಓಡಾಡುತ್ತಿರುವುದನ್ನು ಜನ ನೋಡಿದ್ದಾರೆ. ಗಣೇಶಗುಡಿ ಸೇತುವೆ ಬಳಿ ಸಂಚರಿಸುವವರು ಆ ಪ್ರಾಣಿಯನ್ನು ಮೊಬೈಲ್ ಕ್ಯಾಮರಾ ಮೂಲಕ ಚಿತ್ರಿಕರಿಸಿದ್ದಾರೆ.
ADVERTISEMENT
ಹೈನಾ ಬಗೆಯ ಪ್ರಾಣಿಗಳು ಈ ಪ್ರದೇಶದಲ್ಲಿ ಕಾಣುವುದು ತೀರಾ ಅಪರೂಪ. ಮಾಂಸಹಾರಿ ಸ್ಥನಿ ಪ್ರಾಣಿಯಾದ ಹೈನಾ ಆಫ್ರಿಕಾ ಹಾಗೂ ಏಷ್ಯಾದ ಮಹಾ ದ್ವೀಪ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ. ನಾಲ್ಕು ಪ್ರಬೇದದ ಹೈನಾಗಳನ್ನು ಈವರೆಗೆ ಗುರುತಿಸಲಾಗಿದೆ. ಹೈನಾಗಳ ಶರೀರ ನಾಯಿಗಳಿಗೆ ಹೋಲುವ ರೀತಿಯಿದ್ದರೂ ಅವುಗಳ ನಡವಳಿಕೆ ಬೆಕ್ಕಿಗೆ ಹತ್ತಿರವಾಗಿರುತ್ತದೆ.
ADVERTISEMENT
ವಿಶಿಷ್ಟ ಪ್ರಮಾಣದ ನಗುವಿನಿಂದ ಹೈನಾ ಗುರುತಿಸಿಕೊಂಡಿದೆ. ಗುಂಪಿನಲ್ಲಿ ವಾಸಿಸುವ ಈ ಜೀವಿ ಸದ್ಯ ದಾಂಡೇಲಿಯಲ್ಲಿ ಒಂಟಿಯಾಗಿ ಕಾಣಿಸಿಕೊಂಡಿದೆ. ಭಾರತದ ಹಲವು ಕಡೆ ಹೈನಾ ಜೀವಿಸುತ್ತಿದ್ದು, ದಾಂಡೇಲಿ ಭಾಗದಲ್ಲಿ ಕಾಣಿಸಿಕೊಂಡಿದ್ದು ಅಪರೂಪ. ಅದರಲ್ಲಿಯೂ ಸ್ಥಳೀಯರ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು ಇದೇ ಮೊದಲು. ಆಹಾರ ಅರೆಸಿ ಬಂದ ಹೈನಾ ಪ್ರಾಣಿಯೂ ರಸ್ತೆಯ ಮೇಲೆ ಓಡಾಡಿದ್ದು, ಅದರ ವಿಡಿಯೋ ಹರಿದಾಡುತ್ತಿದೆ. ಹೈನಾ ಸಂಚರಿಸಿದ ವಿಡಿಯೋ ಇಲ್ಲಿ ನೋಡಿ..