ಅರಣ್ಯಾಧಿಕಾರಿಗಳ ತಪ್ಪು ನೀತಿಯಿಂದ ಅರಣ್ಯವಾಸಿಗಳಿಗೆ ಅನ್ಯಾಯವಾಗುತ್ತಿದ್ದು, ಇದನ್ನು ವಿರೋಧಿಸಿ ಶಿರಸಿಯಲ್ಲಿ ನವೆಂಬರ್ 11ರಂದು ಸಮಾಲೋಚನೆ ಸಭೆ ನಡೆಸುವ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ತಿಳಿಸಿದ್ದಾರೆ.
Advertisement. Scroll to continue reading.
ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕಾನೂನು ಮತ್ತು ಸರ್ಕಾರದ ಆದೇಶ ಉಲ್ಲಂಘಿಸಿ ರಾಜ್ಯದಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆದಿದೆ. ಅರಣ್ಯಾಧಿಕಾರಿಗಳ ತಪ್ಪು ನೀತಿಯಿಂದ ಅತಿಕ್ರಮಣದಾರರು ಹಿಂಸೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶಿರಸಿಯಲ್ಲಿ ನವೆಂಬರ್ 11 ರಂದು ಸಮಾಲೋಚನೆ ಸಭೆ ಜರುಗಿಸಲಾಗಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರೂ ಆಗಿರುವ ರವಿಂದ್ರ ನಾಯ್ಕ ಅವರು ಘೋಷಿಸಿದರು.
`ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರಿಯೆ ಚಟುವಟಿಕೆ ಮತ್ತು ಸಾಗುವಳಿಗೆ ಆತಂಕಗೊಳಿಸಬಾರದು ಎಂಬ ನಿರ್ದೇಶನವಿದೆ. ಅರ್ಜಿ ಪರಿಶೀಲನಾ ಪ್ರಕ್ರಿಯೆ ಪೂರ್ಣ ಆಗುವವರೆಗೆ ಅದೀಬೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸತಕ್ಕದ್ದಲ್ಲ ಎಂಬ ಸೂಚನೆಯಿದೆ. ಅದಾಗಿಯೂ ಅರಣ್ಯಾಧಿಕಾರಿಗಳು ರಾಜ್ಯಾದ್ಯಂತ ಸರ್ಕಾರದ ಆದೇಶ ಉಲ್ಲಂಘಿಸುತ್ತಿದ್ದಾರೆ’ ಎಂದು ದೂರಿದರು.
ಸಂಘಟನೆ ಜಿಲ್ಲಾ ಸಂಚಾಲಯಕ ಇಬ್ರಾಹೀಂ ಗೌಡಳ್ಳೀ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗನೂರು, ರಾಜೇಶ್ ಮಿತ್ರ ನಾಯ್ಕ ಸಂಚಾಲಕ, ಅಮೋಜ್, ಕಾಂಚನ ದೇಸಾಯಿ, ಕೆಂಚಲಯ್ಯ, ಮಾಬ್ಲೇಶ್ವÀವರ ಹೊನ್ನಳಕರ್ ಉಳವಿ, ಪ್ರಕಾಶ್ ಕೃಷ್ಣ ಆಚಾರಿ ಮತ್ತು ಪುಷ್ಪಾ ಆಚಾರಿ ಹಾಜರಿದ್ದರು.