ವಿಪರೀತ ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿದ್ದ ಹಳಿಯಾಳದ ವಿದ್ಯಾರ್ಥಿಯೊಬ್ಬರು ಮೊಬೈಲ್ ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಷ್ಟೇ ಕೇಳಿದರೂ ಪಾಲಕರು ಮೊಬೈಲ್ ಕೊಡಿಸಲಿಲ್ಲ ಎಂಬ ಸಿಟ್ಟಿನಲ್ಲಿ ಪ್ರೀತಂ ಮಾಳ್ವಿ ನೇಣು ಹಾಕಿಕೊಂಡಿದ್ದಾರೆ.
Advertisement. Scroll to continue reading.
ಹಳಿಯಾಳದ ಕೆಕೆ ಹಳ್ಳಿಯಲ್ಲಿ ಪ್ರೀತಂ ನಾಗರಾಜ ಮಾಳ್ವಿ (15) ವಾಸವಾಗಿದ್ದರು. ವಿಪರೀತ ಮೊಬೈಲ್ ನೋಡುತ್ತಿದ್ದ ಕಾರಣ ಪಾಲಕರು ಅವರಿಗೆ ಬೈದಿದ್ದರು. `ತನಗೂ ಹೊಸ ಮೊಬೈಲ್ ಬೇಕು’ ಎಂದು ಪ್ರೀತಂ ಪಟ್ಟು ಹಿಡಿದಿದ್ದರು. ಆದರೆ, ಪಾಲಕರು ಮೊಬೈಲ್ ಕೊಡಿಸಿರಲಿಲ್ಲ.
ಮೊಬೈಲಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪ್ರೀತಂ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆದಿತ್ತು. ಆದರೆ, ಹಠ ಸ್ವಭಾವದ ಪ್ರೀತಂ ಅದನ್ನು ತಲೆಗೆ ಹಾಕಿಕೊಂಡಿರಲಿಲ್ಲ. ಮೊಬೈಲ್ ಬೇಕು ಎಂದು ಹಿಡಿದ ಪಟ್ಟನ್ನು ಸಡಿಲ ಮಾಡಿರಲಿಲ್ಲ. ಪಾಲಕರು ಸಹ ಮೊಬೈಲ್ ಮೋಹದಿಂದ ಹೊರಬರುವಂತೆ ಮಾಡಲು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರು.
ಮೊಬೈಲ್ ಸಿಗದ ಬೇಸರದಲ್ಲಿದ್ದ ಪ್ರೀತಂ ಮಾಳ್ವಿ ಅವರು ನವೆಂಬರ್ 18ರ ಸಂಜೆ ಅಡುಗೆ ಮನೆ ಪ್ರವೇಶಿಸಿದರು. ಅಲ್ಲಿ ಎಲ್ಲಾ ಕಡೆ ಮೊಬೈಲಿಗಾಗಿ ಹುಡುಕಾಟ ಮಾಡಿದರು. ಮೊಬೈಲ್ ಸಿಗದ ಬೇಸರಕ್ಕೆ ಒಳಗಾಗಿ ಅಲ್ಲಿಯೇ ನೇಣು ಹಾಕಿಕೊಂಡರು. ಸಾವನಪ್ಪಿದ ಪ್ರೀತಂ ಮಾಳ್ವಿ ಅವರನ್ನು ನೋಡಿ ಕುಟುಂಬದವರು ಆಘಾತಕ್ಕೆ ಒಳಗಾದರು.
`ಆತ್ಮಹತ್ಯೆ ಅಪರಾಧ’