ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷಾಚರಣೆಯ ಅಂಗವಾಗಿ ದೇಶದ ಎಲ್ಲಡೆ ಶ್ರೀರಾಮ ದಿಗ್ವಿಜಯ ರಥಯಾತ್ರೆ ಸಂಚರಿಸುತ್ತಿದ್ದು, ಬುಧವಾರ ಈ ರಥ ಕುಮಟಾ ಪ್ರವೇಶಿಸಿದೆ. ಜಿಎಸ್‌ಬಿ ಸಮುದಾಯದವರು ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
Advertisement. Scroll to continue reading.
ಅಕ್ಟೋಬರ್ 18ರಂದು ಬದ್ರಿನಾಥದಿಂದ ಆರಂಭಗೊAಡ ಶ್ರೀರಾಮ ದಿಗ್ವಿಜಯ ರಥಯಾತ್ರೆ ಈ ದಿನ ಕುಮಟಾ ತಾಲೂಕಿನ ವಿವಿಧ ಕಡೆ ಸಂಚರಿಸಿದೆ. ಪಟ್ಟಣದ ಹೆರವಟ್ಟಾ ಶ್ರೀ ವರದ ವಿಠ್ಠಲ ದೇವಾಲಯ, ದೇವಕೀಕೃಷ್ಣ, ವೆಂಕಟ್ರಮಣ, ಮೂಡಗಣಪತಿ, ರಾಯೇಶ್ವರ ಕಾವೂರು ಕಾಮಾಕ್ಷಿ, ಮಹಾಲಸಾ ನಾರಾಯಣಿ, ಸಾತೇರಿ ಕಾಮಾಕ್ಷಿ ದೇವಾಲಯಗಳಿಗೆ ಸಂಚರಿಸಿ ಭಕ್ತರನ್ನು ಆಶೀರ್ವದಿಸಿದೆ.
ಅಲ್ಲಿ ನಡೆದ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಭಕ್ತರು ಭಾಗವಹಿಸಿದ್ದರು. ರಾಮ ಭಕ್ತರ ಜೊತೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಾವಿರಾರು ಜನ ಭಜನೆ, ರಾಮತಾರಕ ಮಂತ್ರ ಪಠಿಸಿದರು. ಕುಮಟಾ ರಥಬೀದಿಯಿಂದ ಸ್ಥಬ್ಧಚಿತ್ರಗಳೊಂದಿಗೆ ಎಲ್ಲಡೆ ಮೆರವಣಿಗೆ ನಡೆಸಿದರು. ಈ ರಥವು ಹೆಗಡೆ ಶ್ರೀ ಶಾಂತಿಕಾAಬಾ ದೇವಾಲಯ, ಉಪ್ಪಿನಪಟ್ಟಣ ಶ್ರೀ ವೆಂಕಟ್ರಮಣ ದೇವಾಲಯ, ಕೋಡ್ಕಣಿ ವೀರವಿಠ್ಠಲ ಮಠ, ಹಿಗೆಗುತ್ತಿಯ ಶ್ರೀ ಮಹಾಲಕ್ಷ್ಮೀ ರವಳನಾಥ ದೇವಾಲಯಗಳಿಗೆ ಭೇಟಿ ನೀಡಿ ಗೋಕರ್ಣದ ಶ್ರೀ ಜೀವೋತ್ತಮ ಮಠಕ್ಕೆ ತೆರಳಿತು.