ಹೊಂಡಗಳಿ0ದ ಕೂಡಿದ ರಾಷ್ಟಿಯ ಹೆದ್ದಾರಿ ಸರಿಪಡಿಸಲು ಕ್ರಮ ಜರುಗಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ ಸಾಕಷ್ಟು ಹೊಂಡಗಳಿoದ ಕೂಡಿದ್ದು, ಪ್ರಯಾಣಿಕರು ಪರದಾಡುತ್ತಿದ್ದರು. ಈ ಮಾರ್ಗದ ಸಂಚಾರ ಅಸ್ತವ್ಯಸ್ಥವಾಗಿದ್ದರಿಂದ ಜನ ತೊಂದರೆ ಅನುಭವಿಸುತ್ತಿದ್ದರು. ಯಲ್ಲಾಪುರ ಬಿಜೆಪಿ ಘಟಕದವರು ಹೊಂಡಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಸದರಿಗೆ ರವಾನಿಸಿದ್ದು, ಇಲ್ಲಿ ಆದ ಅಪಘಾತಗಳ ಪ್ರಮಾಣದ ಅಂಕಿ-ಸoಖ್ಯೆಗಳನ್ನು ಒದಗಿಸಿದ್ದರು. ಅದರ ಅನ್ವಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಮಾತನಾಡಿ ತುರ್ತು ಕ್ರಮಕ್ಕೆ ಒತ್ತಡ ತಂದಿದ್ದರು.
ಯಲ್ಲಾಪುರದಿAದ ಕಲಘಟಕಿವರೆಗಿನ ಎಲ್ಲಾ ಹೊಂಡಗಳನ್ನು ಕೂಡಲೇ ಮುಚ್ಚುವಂತೆ ಸಂಸದರು ತಾಕೀತು ಮಾಡಿದ ಪರಿಣಾಮ ಇದೀಗ ಹೆದ್ದಾರಿ ಹೊಂಡ ಮುಚ್ಚುವ ಕೆಲಸ ಶುರುವಾಗಿದೆ. ಯಲ್ಲಾಪುರದಿಂದ ಗುಳ್ಳಾಪುರ ಮಾರ್ಗವಾಗಿರುವ ಹೆದ್ದಾರಿ ಹೊಂಡವನ್ನು ಸಹ ಮುಚ್ಚುವ ಭರವಸೆ ಸಿಕ್ಕಿದೆ. ತಾವು ಹೇಳಿದ ಕೆಲಸ ಮಾಡಿದಕ್ಕಾಗಿ ಕಾಗೇರಿ ಅವರಿಗೆ ಪ್ರಸಾದ ಹೆಗಡೆ ಫೋನ್ ಮಾಡಿ ಕೃತಜ್ಞತೆ ಹೇಳಿದ್ದಾರೆ.