ಮಾದಕ ವ್ಯಸನಗಳಲ್ಲಿ ಒಂದಾದ ಚರಸ್ ಮಾರಾಟದಲ್ಲಿ ತೊಡಗಿದ್ದ ಮುಂಡಗೋಡಿನ ಇಂಜಿನಿಯರ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬಳಿ 8 ಲಕ್ಷ ರೂ ಮೌಲ್ಯದ 781 ಗ್ರಾಂ ಚರಸ್ ಸಿಕ್ಕಿದೆ.
ಸುಭಾಷ್ ನಗರದ ಸಚಿನ್ ಟೆಕ್ ಬಹದ್ದೂರ್ ಗೂರ್ಖಾ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಸಾಕಷ್ಟು ಓದಿಕೊಂಡಿದ್ದ ಅವರಿಗೆ ಇಂಜಿನಿಯರ್ ಹುದ್ದೆ ಸಿಕ್ಕಿತ್ತು. ಜೊತೆಗೆ ಕೈ ತುಂಬ ಸಂಬಳವೂ ಇತ್ತು. ಅದಾಗಿಯೂ ಅವರು ಅಡ್ಡದಾರಿ ಹಿಡಿದು ಮಾದಕ ವ್ಯಸನ ಮಾರಾಟಕ್ಕೆ ಮುಂದಾಗಿದ್ದರು.
ಶುಕ್ರವಾರ ಶಿರಸಿ-ಹುಬ್ಬಳ್ಳಿ ಮಾರ್ಗದ ಮುಂಡಗೊಡು ಕೆಎಸ್‌ಆರ್‌ಟಿಸಿ ಬಸ್
ಡಿಪೋ ಹತ್ತಿರ ಬೈಕಿನಲ್ಲಿ ಹೋಗುತ್ತಿದ್ದ ಸಚಿನ್ ಅವರನ್ನು ಪೊಲೀಸರು ನಿಲ್ಲಿಸಿದರು. ತಪಾಸಣೆ ನಡೆಸಿದಾಗ ಮಾದಕ ವಸ್ತು ಸಿಕ್ಕಿತು. ಚೆರಸ್ ವಶಕ್ಕೆಪಡೆದ ಪೊಲೀಸರು ಆತನನ್ನು ಬಂಧಿಸಿದರು. ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ, ಪಿಎಸ್ ಐ ಯಲ್ಲಾಲಿಂಗ ಕುನ್ನೂರ, ಸಿಬ್ಬಂದಿ ಕೋಟೇಶ್ವರ ನಾಗರವಳ್ಳಿ, ಮಹಾಂತೇಶ ಮುಧೋಳ, ಅಣ್ಣಪ್ಪ ಬುಡಿಗೇರ, ಶಿವಾನಂದ ದಾನಣ್ಣವರ, ಅನ್ವರ ಬಮ್ಮಿಗಟ್ಟಿ, ಚಾಲಕ ಗುರುರಾಜ ಈ ಕಾರ್ಯಾಚರಣೆಯಲ್ಲಿದ್ದರು.
`ಮಾದಕ ವ್ಯಸನ ಜೀವನಕ್ಕೆ ಮಾರಕ’