ಸರಾಯಿ ಕುಡಿಯಲು ಹಣ ಕೊಡದ ಕುಟುಂಬದವರನ್ನು ಹೆದರಿಸುವುದಕ್ಕಾಗಿ ಸತೀಶ ನಾಯ್ಕ ಅವರು ವಿಷ ಕುಡಿದಿದ್ದಾರೆ. ಹೆಂಡತಿ-ಮಕ್ಕಳನ್ನು ಬೆದರಿಸಲು ಕುಡಿದ ಕ್ರಿಮಿನಾಶಕ ಅವರ ಜೀವ ತೆಗೆದಿದೆ.
ಸಿದ್ದಾಪುರದ ಸತೀಶ ರಾಮಾ ನಾಯ್ಕ ಅವರು ಕಳೆದ 15 ವರ್ಷಗಳಿಂದ ಸರಾಯಿ ಕುಡಿಯುತ್ತಿದ್ದರು. ಮೊದಲು ದುಡಿಮೆಗೆ ಹೋಗುತ್ತಿದ್ದ ಅವರು ದುಡಿತದ ಹಣವನ್ನು ಮದ್ಯ ವ್ಯಸನಕ್ಕೆ ಮೀಸಲಿಟ್ಟಿದ್ದರು. ಕೆಲಸ ಮಾಡಿದಾಗ ಸಿಕ್ಕಿದ ಹಣವನ್ನು ಅವರು ಮನೆಯವರಿಗೆ ಕೊಡುತ್ತಿರಲಿಲ್ಲ. ಅದಾದ ನಂತರ ತಮ್ಮ ವ್ಯಸನಕ್ಕಾಗಿ ಕುಟುಂಬದವರಲ್ಲಿಯೂ ಹಣ ಬೇಡಲು ಶುರು ಮಾಡಿದ್ದರು.
ಮನೆಯಲ್ಲಿ ಕಾಸು ಕೊಡದೇ ಇದ್ದಾಗ ವಿಷ ಕುಡಿಯುವುದಾಗಿ ಸತೀಶ ನಾಯ್ಕ ಅವರು ಬೆದರಿಸುತ್ತಿದ್ದರು. ನವೆಂಬರ್ 22ರಂದು ಸತೀಶ್ ನಾಯ್ಕ ಅವರು ಸರಾಯಿ ಕುಡಿದು ಸಿಟ್ಟಿನಲ್ಲಿದ್ದರು. ಅದಾಗಿಯೂ ಹಣ ಕೊಡುವಂತೆ ಮನೆಯಲ್ಲಿ ಕೇಳಿದ್ದರು. ಹಣ ಕೊಡದ ಕಾರಣ ಅವರು ಗದ್ದೆಗೆ ಬರುವ ಹುಳಕ್ಕೆ ಹೊಡೆಯುವ ಔಷಧಿ ಸೇವಿಸಿದರು. ಅದಾದ ನಂತರ ಪತ್ನಿಯನ್ನು ಹೆದರಿಸಲು ಗಂಗೆ ನಾಯ್ಕ ಅವರ ಕಡೆ ಆ ವಿಷದ ಬಾಟಲಿಯನ್ನು ಅವರ ಕಡೆ ಎಸೆದರು.
ತಂದೆ ವಿಷ ಕುಡಿದಿರುವುದನ್ನು ಅರಿತ ಅಶೋಕ ನಾಯ್ಕ ಅವರು ಆಂಬುಲೆನ್ಸ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ನವೆಂಬರ್ 23ರಂದು ಅವರು ಸಾವನಪ್ಪಿದರು.