ದಂತವೈದ್ಯರಾಗಿ ಅನೇಕರ ಹಲ್ಲಿನ ಸಮಸ್ಯೆ ದೂರ ಮಾಡಿದ್ದ ರವಿ ಉಪಾಧ್ಯ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಮಟಾದ ಹೊಸಹೆರವಟ್ಟಾದ ವರದ ವಿಠ್ಠಲ ದೇವಸ್ಥಾನದ ಬಳಿ ರವಿ ವಿಜಯ ಉಪಾಧ್ಯ (46) ಅವರು ವಾಸವಾಗಿದ್ದರು. ಎಲ್ಲರ ಜೊತೆ ಚನ್ನಾಗಿಯೇ ಇದ್ದ ಅವರು ಕಳೆದ 10 ತಿಂಗಳಿನಿoದ ಮಂಕಾಗಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿ ಶಿವಮೊಗ್ಗದ ಶ್ರೀಧರ ನರ್ಸಿಂಗ್ ಹೋಮಿನಲ್ಲಿ ಚಿಕಿತ್ಸೆಯನ್ನುಪಡೆದಿದ್ದರು.
ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದ ಅವರು ನವೆಂಬರ್ 23ರಂದು ದಿಢೀರ್ ಆಗಿ ದುಡುಕು ನಿರ್ಧಾರ ಮಾಡಿದರು. ಹೊಸಹೆರವಟ್ಟಾದ ವರದ ವಿಠ್ಠಲ ದೇವಾಲಯ ಬಳಿಯಿರುವ ತಮ್ಮ ಮನೆಯಲ್ಲಿ ಅವರು ಇಸ್ತ್ರಿ ಪೆಟ್ಟಿಗೆಯ ವೈಯರನ್ನು ಕುತ್ತಿಗೆಗೆ ಸುತ್ತಿಕೊಂಡು ನೇಣಿಗೆ ಶರಣಾದರು. ಮಲಗುವ ಕೋಣೆಯಲ್ಲಿ ಶವ ನೋಡಿದ ಕುಟುಂಬದವರು ಆಘಾತಕ್ಕೆ ಒಳಗಾದರು.
ಎ ವಿ ಬಾಳಿಗಾ ಕಾಲೇಜಿನಲ್ಲಿ ಉಪನ್ಯಾಸಕಾರಿಗಿರುವ ಪ್ರಕಾಶ ರಾಮಕೃಷ್ಣ ಪಂಡಿತ ಅವರು ಭಾವನ ನಿಧನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪಿಸೈ ಮಂಜುನಾಥ ಗೌಡರ್ ಅವರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದರು.