ಕಳೆದ ಎಂಟು ವರ್ಷಗಳಿಂದ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹೆದ್ದಾರಿ ಅಗಲೀಕರಣ ಕಾಮಗಾರಿ ಜನರಿಗೆ ಅನುಕೂಲ ಮಾಡಿಕೊಡುವುದಕ್ಕಿಂತಲೂ ಹೆಚ್ಚಿನ ಅನಾನುಕೂಲ ಮಾಡುತ್ತಿದೆ. ಅರೆಬರೆ ಹೆದ್ದಾರಿ ಕಾಮಗಾರಿ ಪರಿಣಾಮ ಹೊನ್ನಾವರದಲ್ಲಿ ಹೆದ್ದಾರಿ ಅಂಚಿನಲ್ಲಿರುವ ಶಾಲೆಗೆ ತೆರಳಬೇಕು ಎಂದರೂ ಮಕ್ಕಳು 2 ಕಿಮೀ ನಡೆಯುವುದು ಅನಿವಾರ್ಯವಾಗಿದೆ.
Advertisement. Scroll to continue reading.
ರಾಷ್ಟಿಯ ಹೆದ್ದಾರಿ ಅಗಲೀಕರಣ ಜವಾಬ್ದಾರಿವಹಿಸಿಕೊಂಡಿರುವ ಐ ಆರ್ ಬಿ ಕಂಪನಿ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಹೊನ್ನಾವರ ನಗರದಲ್ಲಿ ಸರ್ವೀಸ್ ರಸ್ತೆ ಬಿಡಲಿಲ್ಲ. ನಗರದೊಳಗೆ ಹೋಗುವ ಉಪರಸ್ತೆಯನ್ನು ಸರಿಪಡಿಸಿಲ್ಲ. ಶರಾವತಿ ಸರ್ಕಲ್ ಬಳಿ ಕೆಳಗಿನ ಪಾಳ್ಯ ಕೇರಿಗೆ ಹೋಗಲು ಪಟ್ಟಣ ಪಂಚಾಯತ್ ಮೆಟ್ಟಿಲುಗಳನ್ನು ನಿರ್ಮಿಸಿದ್ದು, ಆ ಮೆಟ್ಟಿಲುಗಳನ್ನು ಐ ಆರ್ ಬಿ ಕಂಪನಿ ಮುಚ್ಚಿ ಹಾಕಿದೆ!
ಅಲ್ಲಿನ ಇಳಿಜಾರಿನಲ್ಲಿರುವ 20 ಮನೆಯವರು ಇದರಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ವಯೋವೃದ್ಧರು ಹಾಗೂ ಮಕ್ಕಳು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಇದೇ ಸ್ಥಳದಲ್ಲಿ ಬುದ್ದಿಮಾಂದ್ಯ ಮಕ್ಕಳ ಶಾಲೆಯೂ ಇದ್ದು, ಹೊನ್ನಾವರ-ಕುಮಟಾಗಳಿಂದ 25 ಮಕ್ಕಳು ಅಲ್ಲಿಗೆ ಬರುತ್ತಾರೆ. ಹೆದ್ದಾರಿ ಪಕ್ಕವೇ ಶಾಲೆಯಿದ್ದರೂ ಹೆದ್ದಾರಿ ಮೇಲ್ದರ್ಜೆಗೆ ಹೋಗಿದ್ದರಿಂದ ಶಾಲೆ-ಮನೆಗಳು 50 ಅಡಿ ಆಳಕ್ಕೆ ತಲುಪಿದೆ. ಇಳಿಯುವ ಮೆಟ್ಟಿಲಿನ ಜೊತೆ ರೇಲಿಂಗ್‌ನ್ನು ಐ ಆರ್ ಬಿ ಕಂಪನಿ ಮುಚ್ಚಿ ಹಾಕಿದೆ. ಹೀಗಾಗಿ ಮಕ್ಕಳು 2ಕಿಮೀ ಸುತ್ತುವರೆದು ಶಾಲೆಗೆ ಬರುವ ಪರಿಸ್ಥಿತಿ ಬಂದಿದೆ.