ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯ ಅನುಷ್ಠಾನದಲ್ಲಿ ರಾಜ್ಯದ ವೈಫಲ್ಯದ ಬಗ್ಗೆ ಅರಣ್ಯವಾಸಿಗಳ ರಾಜ್ಯ ಒಕ್ಕೂಟ ಕಳವಳವ್ಯಕ್ತಪಡಿಸಿದೆ. ಯಲ್ಲಾಪುರದ ಟೀಡ್ ಟ್ರಸ್ಟಿನ ಸಭಾಂಗಣದಲ್ಲಿ ಸಭೆ ನಡೆಸಿದ ಅರಣ್ಯ ಹಕ್ಕು ಹೋರಾಟ ಸಮಿತಿಗಳ ರಾಜ್ಯ ಒಕ್ಕೂಟದ ಕಾರ್ಯಕಾರಿ ಸಮಿತಿಯು ರಾಜ್ಯ ಸಂಚಾಲಕ ಚಂದ್ರಕಾAತ ಕೊಚರೇಕರ ಅವರು ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯ ಅನುಷ್ಠಾನದಲ್ಲಿನ ರಾಜ್ಯದ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ.
`ಪಶ್ಚಿಮಘಟ್ಟ ಮತ್ತು ಅದರ ಅಂಚಿನಲ್ಲಿರುವ ಬಹುತೇಕ ಎಲ್ಲ ಸಮುದಾಯಗಳ ಜನರೂ ಸಹ ಸ್ವಾತಂತ್ರ ಪೂರ್ವದಿಂದ ತಮ್ಮ ಆಹಾರ ಮತ್ತು ಜೀವನೋಪಾಯಕ್ಕೆ ಅರಣ್ಯ ಉತ್ಪನ್ನಗಳನ್ನು ಹಾಗೂ ಅರಣ್ಯ ಭೂಮಿಯನ್ನು ಅವಲಂಬಿಸಿದ್ದರು. ಅಕ್ಕಿಯ ಬದಲಿಗೆ ಅರಣ್ಯದಲ್ಲಿ ಬೆಳೆಯುವ ಅನೇಕ ಗಡ್ಡೆಗೆಣಸು, ತಾಳೆಹಿಟ್ಟು, ಬಿದಿರುಭತ್ತ ಈ ಪ್ರದೇಶದ ಜನರ ಆಹಾರವಾಗಿತ್ತು. ರಾಣಿ ಚೆನ್ನಭೈರಾದೇವಿಯ ಕಾಲದಿಂದಲೂ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಬಹುತೇಕ ಜನರು ಜೀವನೋಪಾಯಕ್ಕೆ ಕಾಳುಮೆಣಸು, ಜುಮ್ಮನಕಾಯಿ ಮತ್ತು ಅಮೃತಬಳ್ಳಿಸಹಿತ ವಿವಿಧ ಔಷಧಿ ಸಸ್ಯಗಳನ್ನು ಬಳಸುತ್ತಿದ್ದರು. ಈ ಬಗ್ಗೆ ಜಿಲ್ಲೆಯ ಗೆಜೆಟಿಯರಿನಲ್ಲಿ ಸಹ ಉಲ್ಲೇಖವಿದೆ’ ಎಂದವರು ಗಮನಸೆಳೆದಿದ್ದಾರೆ. ಹೀಗಿರುವಾಗ `ಅರಣ್ಯ ಹಕ್ಕುಕಾಯ್ದೆಯು ಅರಣ್ಯವಾಸಿಗಳ ಪರವಾಗಿದ್ದರೂ ಸಹ ಅರಣ್ಯವಾಸಿಗಳಿಗೆ ಭೂಮಿಯ ಹಕ್ಕು ನೀಡಲು ನಮ್ಮ ರಾಜ್ಯದಲಿ ್ಲಮೀನಮೇಷ ಮಾಡುತ್ತಿರುವುದು ಏಕೆ?’ ಎಂದವರು ಪ್ರಶ್ನಿಸಿದ್ದಾರೆ
`ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ ರಾಜ್ಯದ ಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯ ಹಕ್ಕು ಸಹಿತ ಗರಿಷ್ಠ ಸೌಲಭ್ಯ ದೊರಕಿಸಿಕೊಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಅಗತ್ಯ ಚಿಂತನೆ ಮಾಡಬೇಕು. ಅಗತ್ಯವಿದ್ದರೆ ಅರಣ್ಯ ಹಕ್ಕು ಕಾಯ್ದೆಯ ಇತರ ಪಾರಂಪರಿಕ ಅರಣ್ಯವಾಸಿ ವ್ಯಾಖ್ಯೆಯ ಮೂರು ತಲೆಮಾರಿನ ವಿವರಣೆಗೆ ಅಗತ್ಯ ತಿದ್ದುಪಡಿ ತರಬೇಕು’ ಎಂದವರು ಆಗ್ರಹಿಸಿದ್ದಾರೆ. `ಅರಣ್ಯ ಹಕ್ಕುಕಾಯ್ದೆಯ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಕೊನೆಯ ಸ್ಥಾನದಲ್ಲಿದೆ’ ಎಂಬ ವಿಷಯವನ್ನು ಅವರು ತೆರೆದಿಟ್ಟಿದ್ದಾರೆ.
ಒಕ್ಕೂಟದ ಕಾರ್ಯಕಾರಿ ಸದಸ್ಯರಾದ ದಾವಣಗೆರೆಯ ಕೆ ವಿ ರೂಪಾ ನಾಯ್ಕ, ಶ್ರೀಧರ ಮಲೆಕುಡಿಯ, ಟೀಡ್ ಟ್ರಸ್ಟಿನ ಮೋಹಿನಿ ಎಸ್ ಪೂಜಾರಿ, ರಾಮನಾಥ ಸಿದ್ಧಿ, ಲೋಕೇಶ ಗೌಡ, ಉಡುಪಿಯ ಅಶೋಕ ಶೆಟ್ಟಿ, ಮಂಜುನಾಥ ಸಿ.ಶಾಸ್ತ್ರಿ, ಗುತ್ತೇವ್ವಾ ಮಣ್ಣೂರು, ಕಾಮಕ್ಷಿ ರಾಯ್ಕರ ಇನ್ನಿತರರು ಈ ಚರ್ಚೆಯಲ್ಲಿ ಭಾಗವಹಿಸಿ, ನಿರ್ಣಯ ಮಂಡಿಸಿದ್ದಾರೆ.