ಎದುರಿನಿಂದ ಬರುತ್ತಿದ್ದ ಕಾರಿಗೆ ಲಾರಿ ಗುದ್ದುವುದನ್ನು ತಪ್ಪಿಸುವುದಕ್ಕಾಗಿ ಚಾಲಕ ಏಕಾಏಕಿ ಸ್ಟೇರಿಂಗ್ ತಿರುಗಿಸಿದ್ದು, ಆ ಲಾರಿ ಮರಕ್ಕೆ ಗುದ್ದಿದೆ. ಒಂದು ತಾಸಿನಿಂದ ಆ ಲಾರಿಯ ಒಳಗೆ ಸಿಲುಕಿದ್ದ ಚಾಲಕನನ್ನು ಸ್ಥಳೀಯರು ಹೊರಗೆಳೆದಿದ್ದಾರೆ.
ಜೋಯಿಡಾ-ಜಗಲಪೇಟೆಯಿಂದದಾAಡೇಲಿಗೆ ಸಂಪರ್ಕಿಸುವ ರಸ್ತೆಯಲ್ಲಿ ಈ ಅವಘಡ ನಡೆದಿದೆ. ಗೋವಾದಿಂದ ದಾಂಡೇಲಿಗೆ ಬರುತ್ತಿದ್ದ ಲಾರಿ ಅಪಘಾತವಾಗಿದೆ. ಅದಾದ ನಂತರ ಲಾರಿ ಪಲ್ಟಿಯಾಗಿದ್ದು, ಅದರೊಳಗಿದ್ದ ಚಾಲಕನಿಗೆ ಹೊರ ಬರಲು ಸಾಧ್ಯವಾಗಿಲ್ಲ.
ಮಂಗಳವಾರ ಸಿಂಗರ್‌ಗಾವ್ ಬಳಿ ಲಾರಿಯೊಳಗೆ ಚಾಲಕ ಸಿಲುಕಿದನ್ನು ಜನ ನೋಡಿದ್ದಾರೆ. ಜನರೇ ಸಾಹಸದಿಂದ ಆತನನ್ನು ಹೊರಗೆ ತಂದು ಆಸ್ಪತ್ರೆಗೆ ಸೇರಿಸಿದ್ದಾರೆ. ಚಾಲಕ ಶಾಹಿದ್ ನಾಯಕವಾಡಿ (24) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಪಡೆಯುತ್ತಿದ್ದಾರೆ. ವಿಷಯ ತಿಳಿದ ತಕ್ಷಣ 108 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಪರಿಣಾಮ ಚಾಲಕನ ಜೀವ ಉಳಿದಿದೆ.