ಶಾಲೆ ಹಾಗೂ ಅಂಗನವಾಡಿಯಿರುವ ಪ್ರದೇಶದಲ್ಲಿ ಪದೇ ಪದೇ ರಸ್ತೆ ಅಪಘಾತ ನಡೆಯುತ್ತಿದ್ದು, ಇದನ್ನು ತಪ್ಪಿಸುವುದಕ್ಕಾಗಿ ಸೂಚನಾ ಫಲಕ ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸೂಚನೆ ನೀಡಿದೆ. ಆದರೆ, ಸೂಚನೆ ತಲುಪಿ ಐದು ತಿಂಗಳಾದರೂ ಅಧಿಕಾರಿಗಳು ಅದನ್ನು ಪಾಲಿಸಿಲ್ಲ.
Advertisement. Scroll to continue reading.
ಕುಮಟಾದ ಜನತಾ ಫ್ಲೋಟ್ ಮಾಸೂರ್ ಕ್ರಾಸ್ ರಸ್ತೆಯ ಪಕ್ಕದಲ್ಲಿ ಶಾಲೆ-ಅಂಗನವಾಡಿಯಿದೆ. ಅಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದ್ದು, ಶಿಕ್ಷಕರೊಬ್ಬರು ಸಾವನಪ್ಪಿದ್ದಾರೆ. ನಿತ್ಯ ನಡೆಯುವ ಅಪಘಾತದಿಂದ ಜನ ಆತಂಕದಲ್ಲಿದ್ದಾರೆ. ಈ ಭಾಗದಲ್ಲಿ ಹಂಪ್ ಅಳವಡಿಸುವುದರ ಜೊತೆ ಸೂಚನಾ ಫಲಕ ನೆಡಬೇಕು ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಹೋರಾಡುತ್ತಿದ್ದಾರೆ. ಶಾಸಕ ಸಚಿವರಿಂದ ಹಿಡಿದು ಮುಖ್ಯಮಂತ್ರಿ ಕಚೇರಿಯವರೆಗೂ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಕೊನೆಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವೂ ಸೂಚನಾ ಫಲಕ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಆದರೆ, ಈ ಸೂಚನೆ ಸಿಕ್ಕಿ ಐದು ತಿಂಗಳಾದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ಈ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ್, ನಿವೃತ್ತ ಅಧಿಕಾರಿ ನಾಗೇಶ್, ಹಿರಿಯ ನಾಗರಿಕರಾದ ಗಣಪತಿ ಪಟಗಾರ, ರತ್ನಾಕರ ಭಟ್, ಅರುಣ್ ಶೇಟ್ ಅವರ ಜೊತೆ ಸೇರಿ ಮತ್ತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರೆ.