ಸಿದ್ದಾಪುರದಲ್ಲಿ ಉಪನ್ಯಾಸಕಾರಿದ್ದ ಕುಮಟಾದ ವಿನು ಭಟ್ಟ ಅವರು ಹೃದಯಘಾತದಿಂದ ಸಾವನಪ್ಪಿದ್ದಾರೆ. ದಿಢೀರ್ ಆಗಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ.
ಕುಮಟಾ ಕಾಗಲಮಾನೀರ ಮೂಲದ ವಿನು ವಿಶ್ವನಾಥ ಭಟ್ಟ (40) ಅವರು ಉಪನ್ಯಾಸಕರಾಗಿದ್ದರು. ಸಿದ್ದಾಪುರದಲ್ಲಿ ವಾಸವಾಗಿದ್ದ ಅವರು ನಿತ್ಯ ವಾಕಿಂಗ್ ಮಾಡುವ ಹವ್ಯಾಸ ಹೊಂದಿದ್ದರು. ಅವರು ಹೃದಯ ರೋಗದಿಂದ ಬಳಲುತ್ತಿದ್ದರೂ ತಮ್ಮ ನಿಯಮಿತ ವ್ಯಾಯಾಮವನ್ನು ಬಿಟ್ಟಿರಲಿಲ್ಲ. ಆರೋಗ್ಯದ ಬಗ್ಗೆ ಅಪಾರ ಕಾಳಜಿ ಇದ್ದ ಕಾರಣ ನಿತ್ಯವೂ ಅವರು ವಾಕಿಂಕ್ ಮಾಡುತ್ತಿದ್ದರು.
ಸೆಪ್ಟೆಂಬರ್ 26ರಂದು ಅವರು ಸಂಜೆ 6.30ಕ್ಕೆ ವಾಕಿಂಗ್ ಹೊರಟಿದ್ದರು. ಅವರಕೊಪ್ಪ ಕಡಗೇರಿ ರಸ್ತೆಯಲ್ಲಿ ಹೊರಟ ಅವರು ಅವರಕೊಪ್ಪದ ಬಳಿ ದಿಢೀರ್ ಆಗಿ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಆಸ್ಪತ್ರೆಗೆ ತರುವ ಮೊದಲೇ ವಿನು ಭಟ್ಟ ಅವರು ಸಾವನಪ್ಪಿದ ಬಗ್ಗೆ ವೈದ್ಯರು ಹೇಳಿದರು.
ಈ ಎಲ್ಲಾ ವಿಷಯಗಳ ಬಗ್ಗೆ ವಿನು ಭಟ್ಟ ಅವರ ತಮ್ಮನ ಮಗ ಮೂರೂರಿನ ಮಹಾಂತೇಶ ಭಟ್ಟ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದರು.