ನಗೀನಾ ಅವರು ಮೊಹಮದ್ ಅವರನ್ನು ಮದುವೆ ಆಗಿ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಮೊಹಮದ್ ಅವರ ಜೊತೆ ಅವರ ಕುಟುಂಬದವರು ಸಹ ವರದಕ್ಷಿಣೆಗಾಗಿ ನಗೀನಾ ಅವರನ್ನು ಕಾಡಿಸುತ್ತಿದ್ದಾರೆ.
ಯಲ್ಲಾಪುರದ ಮಂಚಿಕೇರಿ ಬಳಿಯ ಹಲಸಿನಕೊಪ್ಪದಲ್ಲಿ ವಾಸವಾಗಿರುವ ಮೊಹಮದ್ ಮುಜಮ್ಮಿಲ್ ಶೇಖ್ ಅವರನ್ನು ನಗೀನಾ ಅವರು ಮದುವೆ ಆಗಿದ್ದಾರೆ. ಆದರೆ, ನಗೀನಾ ಅವರು ವರದಕ್ಷಿಣೆ ಕೊಡದ ಕಾರಣ ಮೊಹಮದ್ ಅವರ ಕುಟುಂಬದವರು ಬೇಸರದಲ್ಲಿದ್ದಾರೆ. ವರದಕ್ಷಿಣೆ ಕೊಡುವಂತೆ ಮೊಹಮದ್ ಕುಟುಂಬದವರು ಕಾಡಿಸುತ್ತಿದ್ದು, ನಗೀನಾ ಅವರ ಮೇಲೆ ದೈಹಿಕ ಹಲ್ಲೆಯನ್ನು ಮಾಡಿದ್ದಾರೆ.
ನಗೀನಾ ಅವರ ಮೇಲೆ ಪತಿ ಮಹಮದ್ ಅವರ ಜೊತೆ ಅತ್ತೆ ಜಾಹೀರಾಬಿ ಶೇಖ್, ಮೈದುನರಾದ ಮಸ್ತಾಪ ಶೇಖ್, ಮಹಮದ್ ರಫೀಕ್ ಶೇಕ್, ಖಾಜಾ ಖರೀಂ ಶೇಖ್, ಮಹಮದ್ ಸಲಿಂ ಶೇಖ್, ಮಹಮದ್ ಗೌಸ್ ಶೇಖ್ ಸೇರಿ ದಬ್ಬಾಳಿಕೆ ನಡೆಸಿದ್ದಾರೆ. 2024ರ ಫೆಬ್ರವರಿ 23ರಿಂದಲೂ ಅವರೆಲ್ಲರೂ ಸೇರಿ ಹಿಂಸೆ ನೀಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಅದನ್ನು ಸಹಿಸಿಕೊಂಡಿದ್ದ ನಗೀನಾ ಅವರು ಇದೀಗ ಪತಿ ಹಾಗೂ ಅವರ ಕುಟುಂಬದ ವಿರುದ್ಧ ಸಿಡಿದೆದ್ದಿದ್ದಾರೆ.
ನವೆಂಬರ್ 7ರಂದು ಆ ಏಳು ಜನ ಸೇರಿ ನಗೀನಾ ಅವರನ್ನು ಪೀಡಿಸಿದ್ದಾರೆ. ವರದಕ್ಷಿಣೆ ತರದ ಕಾರಣ ಮೈ ಮುಟ್ಟಿ ಮಾತನಾಡಿಸಿದ್ದಾರೆ. ಜೊತೆಗೆ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ನಗೀನಾ ಅವರು ತಂದೆ-ತಾಯಿಗೆ ಹೇಳಿದ್ದು, ಅವರ ಸಲಹೆ ಮೇರೆಗೆ ಗಂಡನ ಜೊತೆ ಅವರ ಕುಟುಂಬದವರ ವಿರುದ್ಧವೂ ದೂರು ನೀಡಿದ್ದಾರೆ.
ಮಹಿಳೆಯ ರಕ್ಷಣೆಗಿರುವ ಸಹಾಯವಾಣಿ ಸಂಖ್ಯೆ: 181