ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಚಳಿಗಾಲದ ಅವಧಿಯಲ್ಲಿ ವಲಸೆ ಬರುವ ಹಕ್ಕಿಯೊಂದರ ಬೆನ್ನಿನ ಮೇಲೆ ಜಿಪಿಎಸ್ ಟ್ರಾಕರ್ ಕಾಣಿಸಿದೆ. ಈ ಹಕ್ಕಿ ಚೀನಾ ದೇಶದಿಂದ ಬಂದಿರುವ ಮಾಹಿತಿ ಸಿಕ್ಕಿದ್ದು, ಅರಣ್ಯ ಇಲಾಖೆಯವರು ಆ ಹಕ್ಕಿಯನ್ನು ಬಂಧಿಸಿದ್ದಾರೆ.
ಅತ್ಯoತ ಸೂಕ್ಷ್ಮ ಪ್ರದೇಶಗಳನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಗೆ ಚೀನಾ ದೇಶದ ಹಕ್ಕಿ ಜಿಪಿಎಸ್ ಹೊತ್ತು ಬಂದಿರುವ ಸುದ್ದಿ ಕೇಳಿ ಜನ ಕಂಗಾಲಾಗಿದ್ದಾರೆ. 2024ರ ನವೆಂಬರ್ 11ರಂದು ಸಹ ಕಾರವಾರದಲ್ಲಿ ಕ್ಯಾಮರಾ ಕಣ್ಣು ಹೊಂದಿದ ಜಿಪಿಎಸ್ ಹಕ್ಕಿ ಕಾಣಿಸಿತ್ತು. ಅನೇಕರು ಹಕ್ಕಿಯ ನಡತೆ ಬಗ್ಗೆ ಅನುಮಾನವ್ಯಕ್ತಪಡಿಸಿದ್ದರು. ಆ ವೇಳೆ `ಮಹಾರಾಷ್ಟ್ರದ ಅರಣ್ಯ ಇಲಾಖೆಯವರು ಅಧ್ಯಯನಕ್ಕಾಗಿ ರಣಹದ್ದಿನ ಮೇಲೆ ಜಿಪಿಎಸ್ ಹಾಗೂ ಸೋಲಾರ್ ಪ್ಲೇಟ್ ಅಳವಡಿಸಿದ್ದಾರೆ’ ಎಂಬುದು ದೃಢವಾಗಿತ್ತು. ಅದರಿಂದ ಜನರ ಆತಂಕ ದೂರವಾಗಿತ್ತು. ಆದರೆ, ಈ ದಿನ ಚೀನಾ ದೇಶದಿಂದ ಸೀಬರ್ಡ ಹಕ್ಕಿ ಕಾರವಾರ ಕಡಲತೀರ ಪ್ರವೇಶಿಸಿದೆ. ಈ ಹಕ್ಕಿಯ ಬೆನ್ನಿನ ಮೇಲೆಯೂ ಸೋಲಾರ್ ಪ್ಲೇಟ್ ಮಾದರಿ ಹಾಗೂ ಜಿಪಿಎಸ್ ಟ್ರಾಕರ್ ಕಾಣಿಸುತ್ತಿದೆ.
ಕಾರವಾರದ ಕಡಲ ತೀರಕ್ಕೆ ವಲಸೆ ಬಂದ ಸೀಗಲ್ ಹಕ್ಕಿಯೊಂದರಲ್ಲಿ ಜಿಪಿಎಸ್ ಟ್ರ‍್ಯಾಕರ್ ಕಾಣಿಸುತ್ತಿದೆ. ಮಂಗಳವಾರ ಬೆಳಗ್ಗೆ ಸಾಲುಮರದ ತಿಮ್ಮಕ್ಕ ಉದ್ಯಾನವನ ಹಿಂಬದಿಯಲ್ಲಿ ಕೂತಿದ್ದ ಸೀಗಲ್ ಹಕ್ಕಿಯನ್ನು ನೋಡಿದ ಜನ ಅರಣ್ಯ ಇಲಾಖೆಗೆ ಫೋನ್ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಮರೈನ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದು, ಸ್ಥಳಕ್ಕೆ ಬಂದ ತಜ್ಞರು ಹಕ್ಕಿಯನ್ನು ಹಿಡಿದಿದ್ದಾರೆ.
ಹಕ್ಕಿಯ ಬೆನ್ನಿನಲ್ಲಿದ್ದ ಜಿಪಿಎಸ್ ನಲ್ಲಿ ಚೈನೀಸ್ ವಿಜ್ಞಾನ ಅಕಾಡೆಮಿಯ ರಿಸರ್ಚ್ ಸೆಂಟರ್ ಫಾರ್ ಇಕೋ-ಎನ್ವಿರಾನ್ಮೆಂಟಲ್ ಸೈನ್ಸ್ ಎಂಬ ವಿಳಾಸವಿದೆ. `ಸೀಗಲ್ ಹಕ್ಕಿಗಳ ಚಲನ ವಲನ, ಆಹಾರ ಹಾಗೂ ವಲಸೆಯನ್ನು ಗುರುತಿಸಲು ಜಿಪಿಎಸ್ ಟ್ರ‍್ಯಾಕರ್ ಬಳಸಲಾಗಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಅಧಿಕಾರಿಗಳು ಅಕಾಡೆಮಿಯ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದು, ಹಕ್ಕಿಯನ್ನು ಮರೈನ್ ಅರಣ್ಯ ವಿಭಾಗದ ಕಚೇರಿಯಲ್ಲಿ ಬಂಧಿಸಿಡಲಾಗಿದೆ.
You cannot copy content of this page