AI ತಂತ್ರಜ್ಞಾನದ ಮೂಲಕ ಹುಡುಗಿಯರನ್ನು ಹುಟ್ಟಿಸುವ ಮ್ಯಾಟ್ರುಮುನಿಗಳು ಶಿರಸಿ-ಯಲ್ಲಾಪುರ-ಕಾರವಾರ ಎಂಬ ಊರುಗಳ ಹೆಸರಿನೊಂದಿಗೆ ಮದುವೆ ಆಗದೇ ನೊಂದಿರುವವರನ್ನು ಯಾಮಾರಿಸುತ್ತಿದ್ದಾರೆ. ಚಂದದ ಹುಡುಗಿಯ ಫೋಟೋ ನೋಡಿದ ಯುವಕರು ತಮ್ಮ ಜಾತಕದ ಜೊತೆ ಮನದಾಳ ಹಂಚಿಕೊಳ್ಳುತ್ತಿದ್ದು, ಮದುವೆ ಆಗದವರ ಖಾಸಗಿ ಮಾಹಿತಿ ಸಂಗ್ರಹಿಸುವ ನಕಲಿ ಸೈಟುಗಳು ಹೆಣ್ಣು ತೋರಿಸುವ ನೆಪದಲ್ಲಿ ಕಾಸು ಕೀಳುತ್ತಿವೆ.
Advertisement. Scroll to continue reading.
ನÀಮ್ಮ ಸಮಾಜದಲ್ಲಿ ಮನೆ-ಮನಗಳನ್ನು ಜೋಡಿಸುವ ಮಹತ್ತರ ಸಂಧಿ. ಕಾಲ ಬದಲಾಗುತ್ತಾ ಬಂದAತೆ ಈ ಸಂಬAಧಗಳ ಹುಡುಕಾಟವೂ ಪರಂಪರೆ, ಶಿಷ್ಠಾಚಾರಗಳಿಂದ ಹೊರಬಂದು, ಆನ್ಲೈನ್ ಮ್ಯಾಟ್ರಮೋನಿಯಲ್ ಸೈಟುಗಳ ಕಡೆ ಸಾಗಿದೆ. ಮದುವೆಗಾಗಿ ಸಂಗಾತಿಯನ್ನು ಹುಡುಕುವ ಅಮಾಯಕರು, ಸುಳ್ಳು ಪ್ರೊಫೈಲುಗಳ ಮೋಸಕ್ಕೊಳಗಾಗಿ ಲಕ್ಷಾಂತರ ರೂ ಹಣ ಕಳೆದುಕೊಳ್ಳುತ್ತಿರುವ ಸಂದರ್ಭಗಳೇ ಹೆಚ್ಚುತ್ತಿವೆ.
ಮದುವೆ ಮಾಡಿಸುವುದಾಗಿ ಜನರನ್ನು ನಂಬಿಸುವ ನಕಲಿ ವೆಬ್‌ಸೈಟುಗಳ ಸಂಖ್ಯೆ ಮಿತಿ ಮೀರಿದೆ. ಬೇಸರವಾದಾಗ ಹುಡುಗಿಯರ ಜೊತೆ ಮಾತನಾಡುವುದಕ್ಕೆ ಸಹ ಅನೇಕ ಸೈಟುಗಳು ತೆರೆದುಕೊಂಡಿದ್ದು, ರಾತ್ರಿ ಬೆಳಗಾಗುವುದರೊಳಗೆ ಹುಟ್ಟುವ ನಕಲಿ ಪ್ರೋಪೈಲುಗಳು ಗಣ್ಯರನ್ನು ಸಹ ಬುಟ್ಟಿಗೆ ಹಾಕಿಕೊಳ್ಳುತ್ತಿವೆ. ಮ್ಯಾಟ್ರುಮುನಿಯ ಡಿಜಿಟಲ್ ಹಾದಿಯೂ ಈಗ ಕತ್ತಲ ಕೊಣೆಯಂತೆ ಕಾಣುತ್ತಿದ್ದು, ಕೇಂದ್ರ ಗೃಹ ಸಚಿವಾಲಯವೇ ನೇರ ಎಚ್ಚರಿಕೆ ಜಾರಿ ಮಾಡುವಷ್ಟು ಗಂಭೀರ ಹಂತಕ್ಕೆ ಮ್ಯಾಟ್ರಮೋನಿಯಲ್ ಅಪರಾಧ ನಡೆಯುತ್ತಿದೆ.
ಮದುವೆಯಲ್ಲ, ಮಹಾ ಮೋಸ!
ಮನೆಗಳಲ್ಲಿ ನಡೆಯುತ್ತಿದ್ದ ವರ-ವಧು ಹುಡುಕಾಟ, ಜಾತಕ-ಕುಲ-ಕುಟುಂಬ ಮಾಹಿತಿ ಪರಿಶೀಲನೆಯ ಹಾದಿ ಈಗ ಮೊಬೈಲ್ ಆಪ್ಲಿಕೇಶನ್ ಪರದೆಗೆ ಸರಿದುಬಿಟ್ಟಿದೆ. ಪರಿಪೂರ್ಣ ಹೊಂದಾಣಿಕೆಯ ಸಂಗಾತಿಯನ್ನು ಕಂಡುಕೊಳ್ಳುವ ಹಾದಿಯೇನೋ ಸುಗಮವಾಗಿದೆಯೆನ್ನಿಸುವಂತೆ ಕಾಣುತ್ತದೆ. ಆದರೆ, ಇದೇ ಜಾಲದಲ್ಲಿ ಈಗ ಅಪಾಯಕಾರಿ ನೆರಳು ದಿನೇ ದಿನೇ ಹೆಚ್ಚುತ್ತಿದೆ. ಸುಳ್ಳು ಪ್ರೊಫೈಲ್, ಡೀಪ್ ಫೇಕ್ ವೀಡಿಯೊಗಳು, ಮಧುರವಾದ ಮಾತುಗಳ ಹಿಂದಿರುವ ಮೋಸಗಾರರ ಕಾರ್ಯವೈಖರಿ ವ್ಯಾಪಕವಾಗಿಬಿಟ್ಟಿದೆ.
ಸಂಗಾತಿಯನ್ನು ಹುಡುಕಲು ಲಾಗಿನ್ ಆದ ಕೆಲವೇ ದಿನಗಳಲ್ಲಿ ಪರಿಚಯ, ಮಧುರ ಮಾತು, ಆತ್ಮೀಯತೆ, ನೂರಾರು ಮೆಸೆಜ್ ಬರುತ್ತದೆ. `ನಿನ್ನಂತವರು ಜೀವನದಲ್ಲಿ ಸಿಗುವುದೇ ಇಲ್ಲ’ ಎಂಬOತೆ ಭಾವನಾತ್ಮಕ ಬಲೆ, ಸುಂದರ ಚಿತ್ರಗಳು, ವಿದೇಶದ ಬ್ಯಾಗ್ರೌಂಡ್, ಯುಕೆ ಡಾಕ್ಟರ್, ದುಬೈ ಇಂಜಿನಿಯರ್, ಅಮೆರಿಕ ಐಟಿ ಪ್ರೊಫೆಷನಲ್ ಎಂಬ ಹೆಸರಿನ ಹಿಂದೆ ನಿಜವಾದ ವ್ಯಕ್ತಿಯೇ ಇರುವುದಿಲ್ಲ. ಒಮ್ಮೆ ಭಾವನೆ ಗಟ್ಟಿಯಾದ ನಂತರವೇ ನಾಟಕ ಶುರುವಾಗುತ್ತದೆ. `ನಿನಗಾಗಿ ವಿಶೇಷ ಗಿಫ್ಟ್ ಕಳುಹಿಸಿದ್ದೇನೆ. ಕಸ್ಟಮ್ಸ್ನಲ್ಲಿ ಸಿಲುಕಿದೆ, ವಿಮಾನ ನಿಲ್ದಾಣದಲ್ಲಿ ಲಗೇಜ್ ಜಪ್ತಿ ಮಾಡಿದ್ದಾರೆ. ದಂಡ ತುಂಬಬೇಕಿದೆ’ ಇತ್ಯಾದಿ ಈ ಮಾತುಗಳಲ್ಲಿ ಒಂದಾದರೂ ಬರುತ್ತದೆ. ಹಣ ಕಳುಹಿಸಿದ ಕ್ಷಣದಲ್ಲೇ ಪ್ರೊಫೈಲ್ ನಾಪತ್ತೆ, ನಂಬರ್ ಸ್ವಿಚ್ ಆಫ್!
ಇನ್ನೂ ಸುಳ್ಳು ಪ್ರೊಫೈಲುಗಳಿಂದ ಜನರನ್ನು ಸೆಳೆಯುವ, ಭಾವನಾತ್ಮಕ ಅವಲಂಬನೆ ನಿರ್ಮಿಸಿ, ನಂತರ ಹಣದ ಬೇಡಿಕೆಯೊಂದಿಗೆ ಬಲೆಗೆ ಎಳೆಯುವ ವಿಧಾನಗಳು ಈಗ ಮ್ಯಾಟ್ರಮೋನಿಯಲ್ ಮೋಸಗಳ ಸಾಮಾನ್ಯ ಮುಖವಾಗಿಬಿಟ್ಟಿದೆ. ವಿಷಾದವೆಂದರೆ, ಈ ಮೋಸದ ಜಾಲಕ್ಕೆ ಬಲಿಯಾಗುತ್ತಿರುವವರೂ ಶಿಕ್ಷಣವಂತರೇ ಆಗಿದ್ದಾರೆ. ನಮ್ಮ ಸಮಾಜದಲ್ಲಿ ಮದುವೆ ಕೇವಲ ಸಂಬAಧವಲ್ಲ, ಅದು ಭವಿಷ್ಯ ಕಟ್ಟುವ ಹಂತ. ಆ ಹಂತಕ್ಕೆ ಕಾಲಿಡುವ ಮುನ್ನ ಯಾರಿಗಾದರೂ ಹೆಚ್ಚು ನಂಬಿಕೆ ಮೂಡುವುದು ಸಹಜ. ಅದೇ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದು ಈ ಅಪರಾಧಿಗಳ ಕುಶಲತೆ.
`ಮುಖತಃ ಭೇಟಿಯಾಗದೇ, ಸರಿಯಾದ ಪರಿಶೀಲನೆ ಮಾಡದೇ, ಯಾರ ಮೇಲೂ ಆರ್ಥಿಕ ನಂಬಿಕೆ ಇರಬಾರದು. ಮ್ಯಾಟ್ರಮೋನಿಯಲ್ ಸೈಟ್ ವೆರಿಫೈಡ್ ಎಂದರೂ ಅದನ್ನೇ ಅಂತಿಮ ಸತ್ಯವೆಂದು ಪರಿಗಣಿಸಬಾರದು. ಯಾರೇ ಆಗಲಿ, ಎಷ್ಟೇ ಸೊಬಗು, ಎಷ್ಟೇ ಸಿಹಿ ಮಾತು, ಎಷ್ಟೇ ಕಥೆ ಹೇಳಿ ಹಣ ಕೇಳಿದ ಕ್ಷಣದಲ್ಲಿ ಅದು ನಂಬಿಕೆಗೆ ಅರ್ಹವಲ್ಲ. ನಿಜವಾದ ಸಂಬOಧ ಹಣ ಕೇಳುವುದರಿಂದ ಆರಂಭವಾಗುವುದಿಲ್ಲ. ಎಚ್ಚರಿಕೆ ಹೆಚ್ಚಿಸುವ ಅಗತ್ಯ’ ಎಂಬುದು ಸೈಬರ್ ತಜ್ಞರ ಮಾತು. `ಇಂದಿನ ಕಾಲದಲ್ಲಿ ಪ್ರೀತಿ ಮತ್ತು ವಂಚನೆ ಒಂದೇ ನಾಣ್ಯದ ಎರಡು ಮಗ್ಗಲುಗಳಂತಿರುವಾಗ, ಜಾಗರೂಕತೆ ಎಂಬುದು ಸಂಬAಧದ ಮೊದಲ ಹೆಜ್ಜೆಯಾಗಬೇಕು. ಲಿಸಿ. ಭಾವನೆ ಇರಲಿ, ಆದರೆ ಜಾಗ್ರತೆ ಕಳೆದುಕೊಳ್ಳಬೇಡಿ’ ಎನ್ನುತ್ತಾರೆ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುತ್ತಿರುವ ಸತೀಶ ಮಾಗೋಡು.