ಯಲ್ಲಾಪುರದ ಕಳಚೆಯ ಜನ ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿ ವಾಸವಾಗಿದ್ದು, ಅವರೆಲ್ಲರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕಳಚೆ ಗ್ರಾಮದಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
Advertisement. Scroll to continue reading.
ಅದರಂತೆ ಕಳಚೆಯ ಸರ್ವೋದಯ ಯುವಕ ಸಂಘದದವರು ಈ ವರ್ಷವೂ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಡಿಸೆಂಬರ್ 27ರಂದು ಸಂಜೆ 4.30ಕ್ಕೆ ಯುವಕ ಸಂಘದ ಸುವರ್ಣ ಮಹೋತ್ಸವದ ಪ್ರಯುಕ್ತ ಹೊರತಂದ `ಸುವರ್ಣ ಸರ್ವೋದಯ’ ಸಂಚಿಕೆ ಲೋಕಾರ್ಪಣೆ ಆಗಲಿದೆ. ಕಳಚೆಯ ಸರ್ವೋದಯ ಸಭಾಮಂಟಪದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನವನ್ನು ನಡೆಸಲಾಗುತ್ತದೆ.
ಸಭಾ ಕಾರ್ಯಕ್ರಮದ ನಂತರ ನೃತ್ಯ ರೂಪಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಗಜಾನನ ನಾಟಕ ಮಂಡಳಿ ಹಾಗೂ ಶ್ರೀ ಲಕ್ಷ್ಮೀನರಸಿಂಹ ನಾಟಕ ಮಂಡಳಿಯ ಕಲಾವಿದರಿಂದ `ಬಸ್ ಕಂಡಕ್ಟರ್ ಹಾಗೂ ಧರ್ಮ ತುಂಬಿದ ಮನೆ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಇದಕ್ಕಿಂತ ಎರಡು ದಿನ ಮೊದಲು `ಕಳಚೆ ಪ್ರೀಮಿಯರ್ ಲೀಗ್’ ಹೆಸರಿನಲ್ಲಿ ಹವ್ಯಕ ತಂಡಗಳ ಕ್ರಿಕೇಟ್ ಪಂದ್ಯಾವಳಿ ನಡೆಯಲಿದೆ. ಸಭೆ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಶಾಸಕ ಶಿವರಾಮ ಹೆಬ್ಬಾರ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರಿಗೆ ಸಂಘಟನೆಯವರು ಆಮಂತ್ರಣ ನೀಡಿದ್ದು, ಅವರೆಲ್ಲರೂ ಭಾಗವಹಿಸುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ಟಿಎಂಎಸ್ ನಿವೃತ್ತ ಮುಖ್ಯಕಾರ್ಯನಿರ್ವಾಹಕ ಸಿ ಎಸ್ ಹೆಗಡೆ ಅವರನ್ನು ಇಲ್ಲಿ ಸನ್ಮಾನಿಸಲಾಗುತ್ತದೆ. ಈ ಬಗ್ಗೆ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಜಿ ಆರ್ ಹೆಗಡೆ, ಸಂಚಾಲಕ ಉಮೇಶ ಭಾಗ್ವತ, ಯುವಕ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ಟ ಸೂತ್ರೆ, ಪ್ರಮುಖರಾದ ವೆಂಕಟರಮಣ ಗಾಂವ್ಕರ, ಅನಂತ ಹೆಗಡೆ, ಶ್ರೀಕಾಂತ ಹೆಬ್ಬಾರ ಅವರು ಮಾಹಿತಿ ನೀಡಿದ್ದಾರೆ.