ಮೊದಲ ಬಾರಿ ದಿವ್ಯಾ ಗೌಡ ಅವರು 800ರೂ ಹೂಡಿಕೆ ಮಾಡಿ 200 ರೂ ಲಾಭ ಮಾಡಿದ್ದು, ಎರಡನೇ ಬಾರಿ 3 ಸಾವಿರ ರೂ ಹೂಡಿಕೆ ಮಾಡಿ 900ರೂ ಲಾಭ ಮಾಡಿದ್ದಾರೆ. ಮೂರನೇ ಬಾರಿ 17 ಲಕ್ಷ ರೂ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ!
Advertisement. Scroll to continue reading.
ಹೊನ್ನಾವರ ಮಾವಿನಕೂರ್ವಾದದಲ್ಲಿ ದಿವ್ಯಾ ಸುಕ್ರು ಗೌಡ ಅವರು ವಾಸವಾಗಿದ್ದಾರೆ. ಆನ್‌ಲೈನ್ ಮೂಲಕ ಉದ್ಯೋಗ ಹುಡುಕುತ್ತಿರುವ ಅವರಿಗೆ ಇನಸ್ಟಾ ಗ್ರಾಮಿನಲ್ಲಿ ವಾಟ್ಸಪ್ ಸಂಖ್ಯೆಯೊAದು ಕಾಣಿಸಿದೆ. `ಮನೆಯಲ್ಲಿಯೇ ಕುಳಿತು ಹಣಗಳಿಸಿ’ ಎಂಬ ಜಾಹೀರಾತಿಗೆ ಅವರು ಮಾರು ಹೋಗಿದ್ದಾರೆ.
ವಾಟ್ಸಪ್ ಮೂಲಕ ಪರಿಚಯ ಆದವರು ವೆಬ್ ಸೈಟ್ ಒಂದನ್ನು ಕಾಣಿಸಿ ಅಲ್ಲಿರುವ ಉತ್ಪನ್ನಗಳಿಗೆ ರೇಟಿಂಗ್ ನೀಡುವಂತೆ ಸೂಚಿಸಿದ್ದಾರೆ. ಅವರ ಸೂಚನೆಯನ್ನು ದಿವ್ಯಾ ಗೌಡ ಅವರು ಪಾಲಿಸಿದ್ದಾರೆ. ಮತ್ತೊಂದು ದಿನ ಇನ್ನೊಂದು ವೆಬ್‌ಸೈಟ್ ಕಾಣಿಸಿ ಅದಕ್ಕೆ ರಿವ್ಯು ಬರೆಯುವಂತೆ ಹೇಳಿದ್ದಾರೆ. ಅದನ್ನು ಸಹ ದಿವ್ಯಾ ಗೌಡ ಅವರು ಮಾಡಿದ್ದಾರೆ.
`ನಾವು ಹೇಳಿದ ಕಡೆ ಹಣ ಹೂಡಿಕೆ ಮಾಡಿದರೆ ಲಾಭ ಬರುತ್ತದೆ’ ಎಂದು ವಂಚಕರು ಹೇಳಿದ್ದಾರೆ. ದಿವ್ಯಾ ಗೌಡ ಅವರು ಮೊದಲು 800ರೂ ಹೂಡಿಕೆ ಮಾಡಿ 1 ಸಾವಿರ ರೂ ಗೆದ್ದಿದ್ದಾರೆ. ಮರುದಿನ 3 ಸಾವಿರ ರೂ ಹೂಡಿಕೆ ಮಾಡಿ 3900ರೂಪಡೆದಿದ್ದಾರೆ. ಅದಾದ ನಂತರ 1710921ರೂ ಹೂಡಿಕೆ ಮಾಡಿದ್ದು, ಆ ಹಣವೂ ಬಂದಿಲ್ಲ. ಲಾಭವೂ ಸಿಕ್ಕಿಲ್ಲ!