ಮೀನು ಮಾರುಕಟ್ಟೆಯ ಬಳಿ ಅರೆನಗ್ನ ರೂಪದಲ್ಲಿ ಮಹಿಳೆಯ ಶವ ಕಾಣಿಸಿದ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಕಾರವಾರ ನಗರದ ಹಳೆ ಮೀನು ಮಾರುಕಟ್ಟೆಯ ಹಳೆಯ ಕಟ್ಟಡದ ಸಮೀಪ ಶವ ಕಾಣಿಸಿದೆ. ಅಂದಾಜು 50 ವರ್ಷದ ಮಹಿಳೆ ಶವವಾಗಿದ್ದು, ಸಾವನಪ್ಪಿದವರ ಗುರುತು ಪತ್ತೆಯಾಗಿಲ್ಲ. ಹಾಲಿ ಕಾರವಾರದಲ್ಲಿ ವಾಸವಾಗಿರುವ ಹೊನ್ನಾವರ ಕವಲಕ್ಕಿಯ ನಾಗರಾಜ ಫಣಿಯಪ್ಪ ಶೆಟ್ಟಿ ಅವಯೀ ಶವ ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದುರ್ವಾಸನೆ ಬರುತ್ತಿರುವುದನ್ನು ನೋಡಿ ಜನ ಆ ಕಡೆ ತೆರಳಿದಾಗ ಶವ ನೋಡಿ ಹೌಹಾರಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೊದಲು ಅಸಹಜ ಸಾವು ಎಂದು ಭಾವಿಸಲಾಗಿದ್ದು, ನಂತರದ ಮರಣೋತ್ತರ ಪರೀಕ್ಷೆಯಲ್ಲಿ ಅಸಹಜ ಸಾವಲ್ಲ ಎಂಬುದು ಗೊತ್ತಾಗಿದೆ.
ಮಹಿಳೆಯ ತುಟಿಯ ಮೇಲೆ ಕಚ್ಚಿದ ಗುರುತು ಕಾಣಿಸಿದೆ. ಉಸಿರುಗಟ್ಟಿಸಿ ಕೊಲೆ ಮಾಡಿದ ಬಗ್ಗೆ ಶವ ಪರೀಕ್ಷೆಯಲ್ಲಿ ಗೊತ್ತಾಗಿದೆ. ಶವದ ಮೇಲೆ ಬಟ್ಟೆಗಳಿರದ ಕಾರಣ ಅತ್ಯಾಚಾರದ ಅನುಮಾನವ್ಯಕ್ತವಾಗಿದೆ. ಮಹಿಳೆಯ ಮಾಹಿತಿ ಜೊತೆ ಆರೋಪಿಗಳಿಗಾಗಿಯೂ ಶೋಧ ನಡೆದಿದೆ.