ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿಯೊಬ್ಬರು ಪತ್ನಿ ಹಾಗೂ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾಗಿದ್ದಾರೆ. ಆತ್ಯಹತ್ಯೆಯ ದೃಶ್ಯವಾಳಿಗಳನ್ನು ನೇರವಾಗಿ ನೋಡಿದವರು ದಂಗಾಗಿದ್ದಾರೆ.
Advertisement. Scroll to continue reading.
ಕಾರವಾರದ ಕೈಗಾ ಅಣು ವಿದ್ಯುತ್ ಘಟಕದಲ್ಲಿ ಸಚ್ಚಿದಾನಂದ ಬೀಕಾಜಿ ವಾಗ್ಳೆಕರ್ (44) ಉದ್ಯೋಗಿಯಾಗಿದ್ದರು. ಮಲ್ಲಾಪುರದ ಮಲ್ಟೀಯಲ್ಲಿ ಅವರು ವಾಸವಾಗಿದ್ದರು. ಅವರ ಮಕ್ಕಳು ಮಂಗಳೂರಿನಲ್ಲಿ ವಾಸವಾಗಿದ್ದು, ಮಕ್ಕಳ ವಿದ್ಯಾಬ್ಯಾಸ ನೋಡಿಕೊಳ್ಳುವುದಕ್ಕಾಗಿ ಸಚ್ಚಿದಾನಂದ ಅವರ ಪತ್ನಿ ಇತಿಶ್ರೀ ಅವರು ಮಂಗಳೂರಿನಲ್ಲಿಯೇ ಇದ್ದರು.
ಡಿಸೆಂಬರ್ 22ರ ರಾತ್ರಿ 11.30ಕ್ಕೆ ಸಚ್ಚಿದಾನಂದ ವಾಗ್ಳೆಕರ್ ಅವರು ಪತ್ನಿ ಇತಿಶ್ರೀ ಅವರಿಗೆ ವಿಡಿಯೋ ಕಾಲ್ ಮಾಡಿದ್ದರು. ಪತ್ನಿ ಹಾಗೂ ಮಕ್ಕಳ ಜೊತೆ ಕೆಲ ಕಾಲ ಮಾತನಾಡಿದ ಅವರು `ಈಗ ಏನು ಮಾಡುತ್ತೇನೆ ನೋಡಿ’ ಎಂದು ಹೇಳಿದರು. ಸಚ್ಚಿದಾನಂದ ವಾಗ್ಳೆಕರ್ ಅವರು ಏನು ಮಾಡಬಹುದು? ಎಂದು ಅವರ ಪತ್ನಿ ಹಾಗೂ ಮಕ್ಕಳು ಕಾಯುತ್ತಿದ್ದರು.
ವಿಡಿಯೋ ಕಾಲ್ ಮೂಲಕ ಮಾತನಾಡುತ್ತಲೇ ಮನೆಯಲ್ಲಿನ ಕೋಣೆ ಪ್ರವೇಶಿಸಿದ ಸಚ್ಚಿದಾನಂದ ವಾಗ್ಳೆಕರ್ ಅವರು ಸ್ಟೂಲ್ ಹತ್ತಿದರು. ಫ್ಯಾನಿಗೆ ಹಗ್ಗ ಕಟ್ಟಿ ಕೊರಳಿಗೆ ಹಾಕಿಕೊಂಡರು. ಕುಟುಂಬದವರು `ಬೇಡ ಬೇಡ’ ಎಂದರೂ ಕೇಳದೇ ಸ್ಟೂಲಿನಿಂದ ಹಾರಿದರು. ಅಲ್ಲಿಗೆ ಅವರ ಪ್ರಾಣಪಕ್ಷಿಯೂ ಹಾರಿ ಹೋಗಿತ್ತು.
`ಆತ್ಮಹತ್ಯೆ ಅಪರಾಧ’