ಶಿರಸಿ ಬಳಿಯ ನಿಸರ್ಗಮನೆಯಲ್ಲಿ ಆಯುರ್ವೇದಿಕ್ ಚಿಕಿತ್ಸೆಗೆ ಒಳಗಾಗಬೇಕಿದ್ದ ಯೋಗ ಶಿಕ್ಷಕರೊಬ್ಬರು ದಿಢೀರ್ ಆಗಿ ಕುಸಿದು ಬಿದ್ದಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ವಿಜಯನಗರ ಹರಪ್ಪನಳ್ಳಿಯ ಸೂರ್ಯ ಪಲ್ಲಾಗಟ್ಟಿ (66) ಅವರು ಖಾಸಗಿ ಸಂಸ್ಥೆಯೊAದರಲ್ಲಿ ಯೋಗ ಶಿಕ್ಷಕರಾಗಿದ್ದರು. ಕೆಲ ವರ್ಷದ ಹಿಂದೆ ಅವರು ನಿವೃತ್ತರಾಗಿದ್ದು, ಅವರ ಕುಟುಂಬದವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಸೂರ್ಯ ಪಲ್ಲಾಗಟ್ಟಿ ಅವರು ಹರಪನಳ್ಳಿಯ ಆಚಾರ್ಯ ಲೇಔಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಸೂರ್ಯ ಪಲ್ಲಾಗಟ್ಟಿ ಅವರಿಗೆ ಈಚೆಗೆ ಗ್ಯಾಸ್ಟಿಕ್ ಸಮಸ್ಯೆ ಕಾಣಿಸಿಕೊಂಡಿತ್ತು. ಅದಕ್ಕಾಗಿ ಅವರು ಶಿರಸಿಯ ನಿಸರ್ಗಮನೆಯಲ್ಲಿ ಆಯುರ್ವೇದಿಕ್ ಚಿಕಿತ್ಸೆಪಡೆಯಲು ನಿರ್ಧರಿಸಿದ್ದರು. ಈ ಬಗ್ಗೆ ಪತ್ನಿ ರಾಣಿ ಎಸ್ಪಿ ಅವರಿಗೆ ಫೋನ್ ಮಾಡಿದ್ದರು. ಚಿಕಿತ್ಸೆಗಾಗಿ ಅವರು ಶಿರಸಿಗೆ ಬಂದಿದ್ದರು. ಡಿ 26ರ ರಾತ್ರಿ 11.40ಕ್ಕೆ ಶಿರಸಿಯ ಶಿವಾಜಿ ಚೌಕ ಬಳಿಯ ಪರಾಗ ಲಾಡ್ಜಿನಲ್ಲಿ ವಸತಿ ಹೂಡಲು ಅವರು ನಿರ್ಧರಿಸಿದ್ದರು.
ಆದರೆ, ಪರಾಗ ಲಾಡ್ಜ ಪ್ರವೇಶಿಸುತ್ತಲೇ ಅವರು ಕುಸಿದು ಬಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಡಿಸೆಂಬರ್ 27ರಂದು ಕುಟುಂಬದವರು ಸೂರ್ಯ ಪಲ್ಲಾಗಟ್ಟಿ ಅವರ ಮೊಬೈಲಿಗೆ ಫೋನ್ ಮಾಡಿದಾಗ ಪೊಲೀಸರು ಆ ಕರೆ ಸ್ವೀಕರಿಸಿದರು. ಸೂರ್ಯ ಪಲ್ಲಾಗಟ್ಟಿ ಅವರು ಕೊನೆಯುಸಿರೆಳೆದ ವಿಷಯ ತಿಳಿಸಿದರು.
ಬೆಂಗಳೂರಿನಲ್ಲಿದ್ದ ರಾಣಿ ಎಸ್ಪಿ ಅವರು ಶಿರಸಿಗೆ ಆಗಮಿಸಿದ್ದು, ವಯೋ ಸಹಜ ಕಾರಣದಿಂದ ಸೂರ್ಯ ಪಲ್ಲಾಗಟ್ಟಿ ಅವರು ಸಾವನಪ್ಪಿರುವ ಬಗ್ಗೆ ಅಂದಾಜಿಸಿದರು. ಅದಾಗಿಯೂ, ಅವರ ಸಾವಿನ ಬಗ್ಗೆ ನಿಖರ ಕಾರಣ ಗೊತ್ತಾಗುವುದಕ್ಕಾಗಿ ಮರಣೋತ್ತರ ಪರೀಕ್ಷೆ ಬಯಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.