ಭಟ್ಕಳದ ಅರುಣ ನಾಯ್ಕ ಅವರ ಮನೆಗೆ ಟಿವಿ ಡಿಶ್ ಕೂರಿಸಲು ಹೋಗಿದ್ದ ಸಂತೋಷ ನಾಯ್ಕ ಅವರು ಮನೆ ಮಹಡಿಯಿಂದ ಬಿದ್ದು ಸಾವನಪ್ಪಿದ್ದಾರೆ.
ಭಟ್ಕಳದ ಗೊರಟೆ ಹೊನ್ನೆಮುಡಿ ಬಳಿಯ ಶಿರಜ್ಜಿಮನೆಯಲ್ಲಿ ಸಂತೋಷ ರಾಮಾ ನಾಯ್ಕ (35) ಅವರು ವಾಸವಾಗಿದ್ದರು. ಎಲೆಕ್ಟಿçಯಿಶನ್ ಆಗಿದ್ದ ಅವರು ಟಾಟಾ ಸ್ಕೈ ಕಂಪನಿಯ ಡಿಶ್ ಕೂರಿಸುವ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 30ರ ಸಂಜೆ ಸಂತೋಷ ನಾಯ್ಕ ಅವರನ್ನು ಬೆಳಕೆ ಕಟಕೇರಿಯ ಆಟೋ ಚಾಲಕ ಅರುಣ ಈರಪ್ಪ ನಾಯ್ಕ ಅವರು ಮನೆಗೆ ಆಮಂತ್ರಿಸಿದ್ದರು.
ಅರುಣ ನಾಯ್ಕ ಅವರ ಮನೆಯಲ್ಲಿದ್ದ ಟಿವಿಗೆ ಕೇಬಲ್ ಕನೆಕ್ಷನ್ ನೀಡಿದ್ದ ಸಂತೋಷ ನಾಯ್ಕ ಅವರು ಮನೆ ಮಹಡಿ ಏರಿ ಡಿಶ್ ಕೂರಿಸುತ್ತಿದ್ದರು. ಆ ಅವಧಿಯಲ್ಲಿ ಸಂತೋಷ ನಾಯ್ಕ ಅವರ ಕಾಲು ಜಾರಿದ್ದು, ಮಹಡಿ ಮೇಲಿಂದ ನೆಲಕ್ಕೆ ಬಿದ್ದರು. ಬಿದ್ದ ರಭಸಕ್ಕೆ ಸಂತೋಷ ನಾಯ್ಕ ಅವರ ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು.
ಸಂತೋಷ ನಾಯ್ಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸವೂ ನಡೆಯಿತು. ಆದರೆ, ಆಸ್ಪತ್ರೆ ಸೇರುವ ಮೊದಲೇ ಸಂತೋಷ ನಾಯ್ಕ ಅವರು ಕೊನೆಯುಸಿರೆಳೆದರು. ತಮ್ಮನ ಸಾವಿನ ಬಗ್ಗೆ ನಾಗೇಶ ರಾಮ ನಾಯ್ಕ ಅವರು ಮಾಹಿತಿ ನೀಡಿದರು.
`ಡಿಶ್ ಕೂರಿಸುವ ತಮ್ಮ ಪರಿಚಯಸ್ಥರಿಗೆ ಈ ಸುದ್ದಿ ಕಳುಹಿಸಿ. ಕೆಲಸದ ಅವಧಿಯಲ್ಲಿ ಮುನ್ನಚ್ಚರಿಕೆವಹಿಸುವಂತೆ ಸೂಚಿಸಿ’