ಯಲ್ಲಾಪುರದ ಶಾಲೆಯೊಂದರಲ್ಲಿ ಬಿಸಿಯೂಟ ಸಿಬ್ಬಂದಿಯಾಗಿದ್ದ ರಂಜಿತಾ ಅವರ ಕೊಲೆಯಾಗಿದೆ. ಮದುವೆಗೆ ಒಪ್ಪದ ಕಾರಣ ರಫೀಕ್ ಅವರು ರಂಚಿತಾ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.
Advertisement. Scroll to continue reading.
ಯಲ್ಲಾಪುರದ ಕಾಳಮ್ಮ ನಗರದಲ್ಲಿ ರಂಜಿತಾ ಮಲ್ಲಪ್ಪ ಬನ್ಸೋಡೆ ಅವರು ವಾಸವಾಗಿದ್ದರು. ರಾಮಾಪುರದ ಸರ್ಕಾರಿ ಶಾಲೆಯಲ್ಲಿ ಅವರು ಅಡುಗೆ ಸಹಾಯಕಿ ಆಗಿದ್ದರು. ಯಲ್ಲಾಪುರದ ಕಾಳಮ್ಮ ನಗರದಲ್ಲಿ ರಂಜಿತಾ ಅವರು ತಂದೆ, ತಾಯಿ ಹಾಗೂ ಅಣ್ಣನ ಜೊತೆ ವಾಸವಾಗಿದ್ದರು. ರಂಜಿತಾ ಅವರಿಗೆ ಮದುವೆ ಆಗಿದ್ದು,5 ವರ್ಷದ ಹಿಂದೆಯೇ ಅವರು ಪತಿಯಿಂದ ದೂರವಾಗಿದ್ದರು. ರಂಜಿತಾ ಅವರಿಗೆ ಮಗನಿದ್ದು, ರಫಿಕ್ ಯಳ್ಳೂರು ಅವರ ಸ್ನೇಹ ಬೆಳೆಸಿದ್ದರು. ಆ ಸ್ನೇಹ ಪ್ರೀತಿಯಾಗಿ ತಿರುವುಪಡೆದಿತ್ತು. ರಂಜಿತಾ ಅವರು ಸಹ ರಫಿಕ್ ಅವರ ಪ್ರೀತಿಗೆ ತಲೆಭಾಗಿದ್ದರು.
ರಂಜಿತ್ ಹಾಗೂ ರಫಿಕ್ ಅವರ ಕುಟುಂಬದ ನಡುವೆಯೂ ಅನ್ಯೋನ್ಯತೆ ಇತ್ತು. ಹೀಗಾಗಿ ರಫಿಕ್ ಸಹ ಆಗಾಗ ರಂಜಿತಾ ಅವರ ಮನೆಗೆ ಬರುತ್ತಿದ್ದರು. ಅಲ್ಲಿಯೇ ಊಟ ಮಾಡಿ ಮರಳುತ್ತಿದ್ದರು. ಈ ನಡುವೆ ರಫಿಕ್ ಪದೇ ಪದೇ ರಂಜಿತಾ ಅವರಿಗೆ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದರು. `ಈಗಾಗಲೇ ಮದುವೆ ಆಗಿ ಸಾಕಷ್ಟು ಅನುಭವಿಸಿದ್ದೇನೆ. ನಾವು ಹೀಗೇ ಇರೋಣ’ ಎಂದು ರಂಜಿತಾ ಹೇಳಿದ್ದರು. ಆದರೆ, ಇದಕ್ಕೆ ಒಪ್ಪದ ರಫಿಕ್ ಮದುವೆಗಾಗಿ ಕಾಡಿಸುತ್ತಿದ್ದರು.
ಶನಿವಾರ ಮಧ್ಯಾಹ್ನ ರಂಜಿತಾ ಅವರು ಶಾಲೆಯಿಂದ ಮರಳುವಾಗ ರಫೀಕ್ ಅವರನ್ನು ಅಡ್ಡಗಟ್ಟಿದರು. `ಮದುವೆ ಆಗುವೆಯಾ?’ ಎಂದು ಮತ್ತೆ ಪ್ರಶ್ನಿಸಿದರು. `ಮದುವೆ ಬೇಡ’ ಎಂದು ರಂಜಿತಾ ಹೇಳಿದ್ದರಿಂದ ರಫೀಕ್ ಸಿಟ್ಟಾದರು. `ನಮ್ಮ ಸಂಭAದ ಹೀಗೆ ಇರಲಿ. ಮದುವೆ ಮಾತ್ರ ಬೇಡ’ ಎಂದು ರಂಜಿತಾ ಹೇಳಿದ್ದರಿಂದ ಕೋಪಗೊಂಡ ರಫೀಕ್ ಅಲ್ಲಿಯೇ ಚಾಕು ಚುಚ್ಚಿದರು.
ರಂಜಿತಾ ಅವರ ಕುತ್ತಿಗೆಗೆ ಚಾಕು ಆಳವಾಗಿ ಇಳಿದಿದ್ದು, ಅವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ತರಲಾಯಿತು. ಡಾ ಸುಶಿಷ್ಟ ಗಣಾಚಾರಿ ಅವರು ಗಂಟಲಿಗೆ ಹೊಲಿಗೆ ಹಾಕಿ ಹುಬ್ಬಳ್ಳಿ ಆಸ್ಪತ್ರೆಗೆ ಕಳುಹಿಸಿದರು. ಆದರೂ, ಚಿಕಿತ್ಸೆಗೆ ಸ್ಪಂದಿಸದೇ ರಂಜಿತಾ ಸಾವನಪ್ಪಿದರು. ರಫೀಕ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕುತ್ತಿದ್ದಾರೆ.