ಪ್ರೀತಿ-ಪ್ರೇಮ ಎಂದು ದುಂಬಾಲು ಬಿದ್ದು ಮದುವೆಗೆ ಒಪ್ಪದ ಕಾರಣ ರಂಜಿತಾ ಅವರಿಗೆ ಚಾಕು ಇರಿದ ರಫೀಕ್ ಕಾಡು ಸೇರಿದ್ದಾರೆ. ಮಾಹಿತಿಗಳ ಪ್ರಕಾರ ಯಲ್ಲಾಪುರದ ಆನಗೋಡು ಭಾಗದ ಕಾಡಿನ ಕಡೆ ರಫೀಕ್ ಓಡಿದ್ದಾರೆ.
ಶನಿವಾರ ಮಧ್ಯಾಹ್ನ ಕಾಳಮ್ಮ ನಗರಕ್ಕೆ ಬಂದಿದ್ದ ರಫೀಕ್ ಆಶ್ರಯ ಕಾಲೋನಿ ಬಳಿ ರಂಜಿತಾ ಅವರ ಕುತ್ತಿಗೆಗೆ ಚಾಕು ಚುಚ್ಚಿದ್ದಾರೆ. ಅದಾದ ನಂತರ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಕಾಳಮ್ಮ ನಗರದ ಗದ್ದೆ ದಾಟಿದ ರಫಿಕ್ ಕಾಜಲವಾಡ ಪ್ರವೇಶಿಸಿ ಅದಾದ ನಂತರ ಆನಗೋಡು ಭಾಗದ ಕಾಡಿನ ಕಡೆ ಪ್ರಯಾಣ ಮಾಡಿದ್ದಾರೆ. ಶನಿವಾರ ರಾತ್ರಿ 10ಗಂಟೆಯವರೆಗೂ ರಫಿಕ್ ಪತ್ತೆ ಆಗಿಲ್ಲ.
ಆರೋಪಿ ರಫಿಕ್ ಬಂಧನಕ್ಕಾಗಿ ಅನೇಕರು ಆಗ್ರಹಿಸುತ್ತಿದ್ದಾರೆ. ಕಾಡು ಪ್ರದೇಶದಲ್ಲಿ ರಫಿಕ್ ಹುಡುಕಾಟ ಮುಂದುವರೆದಿದೆ. ರಫಿಕ್ ಕೊನೆಯದಾಗಿ ಕಪ್ಪು ಬಣ್ಣದ ಅಂಗಿ ಧರಿಸಿದ್ದು, ಆರೋಪಿಯ ಫೋಟೋವನ್ನು ಪೊಲೀಸರು ಹಂಚಿಕೊAಡಿದ್ದಾರೆ. ಸಾರ್ವಜನಿಕರ ಸಹಾಯವನ್ನು ಕೋರಿದ್ದು, ಶೋಧ ಕಾರ್ಯ ಜೋರಾಗಿದೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಯಲ್ಲಾಪುರದಲ್ಲಿ ಬೀಡು ಬಿಟ್ಟಿದ್ದಾರೆ. ಆರೋಪಿ ಬಂಧಿಸುವ ಜೊತೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಯೂ ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.