ಪಕ್ಕದ ಮನೆಯಲ್ಲಿ ಜಗಳ ನಡೆದ ಜಗಳವನ್ನು ವಿಡಿಯೋ ಮಾಡಿದ ಕಾರಣ ಅಂಕೋಲಾದ ಅಪೇಕ್ಷಾ ನಾಯಕ ಅವರು ಪೆಟ್ಟು ತಿಂದಿದ್ದಾರೆ. ಅಪೇಕ್ಷಾ ನಾಯಕ ಅವರನ್ನು ಸಮರ್ಥಿಸಿಕೊಳ್ಳಲು ಹೋದ ಅವರ ಪತಿ ಗರೀಶ ನಾಯಕ ಅವರಿಗೂ ಮಂಜುನಾಥ ನಾಯಕ ಅವರು ಹೊಡೆದು ಕಳುಹಿಸಿದ್ದಾರೆ. ಇದರಿಂದ ಸಿಟ್ಟಾದ ಮಂಜುನಾಥ ನಾಯಕ ಅವರು ಗುಂಪು ಕಟ್ಟಿಕೊಂಡು ಬಂದು ಅಪೇಕ್ಷಾ ನಾಯಕ ಅವರ ಕುಟುಂಬದವರ ಮೇಲೆ ಆಕ್ರಮಣ ಮಾಡಿದ್ದಾರೆ.
ಜನವರಿ 4ರಂದು ಅಂಕೋಲಾದ ಹಿಲ್ಲೂರು ಬಳಿಯ ಮರಾಕಲ್’ನ ಮಂಜುನಾಥ ಬೊಮ್ಮಯ್ಯ ನಾಯಕ ಹಾಗೂ ಲಕ್ಷಿö್ಮÃಧರ ಅವರ ನಡುವೆ ಜಗಳ ನಡೆಯುತ್ತಿತ್ತು. ಆ ಜಗಳವನ್ನು ಅದೇ ಊರಿನ ಅಪೇಕ್ಷಾ ನಾಯಕ ಅವರು ವಿಡಿಯೋ ಮಾಡಿದ್ದರು. ಜಮೀನು ವಿಷಯವಾಗಿ ಅಪೇಕ್ಷಾ ನಾಯಕ ಅವರ ಕುಟುಂಬದ ವಿರುದ್ಧ ಸಿಟ್ಟಾಗಿದ್ದ ಮಂಜುನಾಥ ನಾಯಕ ಅವರು ಜಗಳದ ವಿಡಿಯೋ ಮಾಡಿದ ಕಾರಣ ರೊಚ್ಚಿಗೆದ್ದರು. `ಸಂಬAಧವಿಲ್ಲದ ವಿಷಯ ವಿಡಿಯೋ ಏಕೆ ಮಾಡುವೆ?’ ಎಂದು ಪ್ರಶ್ನೆ ಮಾಡಿ ಅಪೇಕ್ಷಾ ನಾಯಕ ಅವರನ್ನು ದಬಾಯಿಸಿದರು. ಅಪೇಕ್ಷಾ ನಾಯಕ ಅವರ ಎದೆಗೆ ಕೈ ಹಾಕಿ ದೂಡಿದರು. ನೆಲಕ್ಕೆ ಬಿದ್ದ ಅಪೇಕ್ಷಾ ನಾಯಕ ಅವರಿಗೆ ನೋವಾಯಿತು.
ಅಪೇಕ್ಷಾ ನಾಯಕ ಅವರು ಈ ವಿಷಯವನ್ನು ಆಟೋ ಚಾಲಕರಾಗಿರುವ ತಮ್ಮ ಪತಿ ಗಿರೀಶ ನಾಯಕ ಅವರಿಗೆ ತಿಳಿಸಿದರು. ಮಂಜುನಾಥ ನಾಯಕ ಅವರ ಬಳಿ ತೆರಳಿದ ಗಿರೀಶ ನಾಯಕ `ನನ್ನ ಹೆಂಡತಿಗೆ ಬೈಯುವೆಯಾ? ಹಿಲ್ಲೂರಿಗೆ ಬಾ ಗತಿ ಕಾಣಿಸುವೆ’ ಎಂದು ಎಚ್ಚರಿಸಿದರು. ಅದೇ ದಿನ ಸಂಜೆ ಮಂಜುನಾಥ ನಾಯಕ ಅವರು ತಮ್ಮ ಪತ್ನಿ ಸಂಧ್ಯಾ ನಾಯಕ ಅವರ ಜೊತೆ ಸೇರಿ ಹಿಲ್ಲೂರಿಗೆ ಹೋದರು. ಅಲ್ಲಿ ಗಿರೀಶ ನಾಯಕ ಅವರ ಜೊತೆ ಅಪೇಕ್ಷಾ ನಾಯಕ ಅವರು ಸಂಧ್ಯಾ ನಾಯಕ ಹಾಗೂ ಮಂಜುನಾಥ ನಾಯಕ ಅವರನ್ನು ಅಡ್ಡಗಟ್ಟಿದರು. ಹಿಲ್ಲೂರಿನ ಗಣಪತಿ ಕೃಷ್ಣ ನಾಯಕ, ರವಿ ಗಣಪತಿ ನಾಯಕ ಅವರು ಸಹ ಮಂಜುನಾಥ ನಾಯಕ ಹಾಗೂ ಸಂಧ್ಯಾ ನಾಯಕ ದಂಪತಿ ಮೇಲೆ ಮುಗಿಬಿದ್ದರು.
`ನನ್ನ ಹೆಂಡತಿ ಜೊತೆ ಜಗಳ ಮಾಡುವೆಯಾ?’ ಎಂದು ಬೈದ ಗಿರೀಶ ನಾಯಕ ಅವರು ಮಂಜುನಾಥ ನಾಯಕ ಅವರನ್ನು ದೊಣ್ಣೆಯಿಂದ ಹೊಡೆದು ಥಳಿಸಿದರು. ಉಳಿದ ಮೂವರು ಗಿರೀಶ ನಾಯಕ ಅವರಿಗೆ ಹೊಡೆಯಲು ಬಂದಾಗ ಸಂಧ್ಯಾ ನಾಯಕ ಅವರು ಅದನ್ನು ತಪ್ಪಿಸುವ ಪ್ರಯತ್ನ ಮಾಡಿದರು. ಆದರೆ, ಅಡ್ಡಬಂದ ಕಾರಣ ಸಂಧ್ಯಾ ನಾಯಕ ಅವರು ಪೆಟ್ಟು ತಿಂದರು. ಈ ವೇಳೆ ಸಿಟ್ಟಿನಲ್ಲಿದ್ದ ಗಿರೀಶ ನಾಯಕ ಅವರು ಸಂಧ್ಯಾ ನಾಯಕ ಅವರಿಗೆ ಚಪ್ಪಲಿಯಿಂದ ಹೊಡೆದರು. `ಸಂದೀಪ ನಾಯಕ ಅವರ ಮನೆಗೆ ಬಾ. ಹಿರಿಯರ ಮುಂದೆ ನಿರ್ಣಯವಾಗಲಿ’ ಎಂದ ಅಪೇಕ್ಷಾ ನಾಯಕ ಈ ವೇಳೆ ಹೇಳಿದರು. `ನಾನು ಮೊಬೈಲ್ ನೋಡುತ್ತಿದ್ದೆ. ವಿಡಿಯೋ ಮಾಡಿಲ್ಲ’ ಎಂದು ಅಪೇಕ್ಷಾ ನಾಯಕ ಆ ವೇಳೆ ಸಮರ್ಥಿಸಿಕೊಂಡರು.
ಅದಾದ ನಂತರ ಈ ಎರಡು ಕಡೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಆದ ವಿದ್ಯಮಾನಗಳ ಬಗ್ಗೆ ವಿವರಿಸಿದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದರು.