ಕುಮಟಾದ ದೀವಗಿ ಬಳಿಯ ಜನತಾ ಕಾಲೋನಿಗೆ ಕುಡಿಯುವ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಹೀಗಾಗಿ ಆ ಭಾಗದ ಜನ ದೀವಗಿ ಗ್ರಾಮ ಪಂಚಾಯತ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
`ಕಳೆದ ಎರಡು ತಿಂಗಳಿನಿAದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಆ ಭಾಗದ ಜನ ದೂರಿದರು. ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಭಾಸ್ಕರ ಪಟಗಾರ ಅವರು ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
`ಜೆಜೆಎ ಕಾಮಗಾರಿಯಿಂದ ಕುಡಿಯುವ ನೀರಿನ ಸರಬರಾಜಾಗುತ್ತಿದ್ದ ಕೊಳವೆಗಳನ್ನು ತೆರವು ಮಾಡಿದ್ದರಿಂದ ನೀರಿನ ಸರಬರಾಜಿನ ನಿರ್ವಹಣೆಗೆ ಸಮಸ್ಯೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದರು. ಆದರೆ, ಆ ಸಮಜಾಯಿಶಿಗೆ ಒಪ್ಪದ ಗ್ರಾಮಸ್ಥರು ವಾಗ್ವಾದ ನಡೆಸಿದರು. ಬಳಿಕ ಗ್ರಾಪಂ ಅಧಿಕಾರಿಗಳು ನಾಳೆಯಿಂದ ನೀರು ಬಿಡುವುದಾಗಿ ಭರವಸೆ ನೀಡಿದ್ದು, ಜನ ಪ್ರತಿಭಟನೆ ಹಿಂಪಡೆದರು.
`ಜೆಜೆಎ ಅಸಮರ್ಪಕ ಕಾಮಗಾರಿಯಿಂದ ಗ್ರಾಮೀಣ ಭಾಗದ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಅಸ್ತವ್ಯಸ್ಥವಾಗಿದೆ. ಹಳೇ ಯೋಜನೆಯ ಕೊಳವೆಯನ್ನು ಬಳಸಿಕೊಂಡು ಜೆಜೆಎಂ ಯೋಜನೆಗೆ ಮಾಡುತ್ತಿರುವ ಆರೋಪ ಇದೆ. ಅಧಿಕಾರಿಗಳು ನೀರಿನ ಪೈಪ್ ದುರಸ್ತಿಯನ್ನು ಜೆಜೆಎಂ ಗುತ್ತಿಗೆದಾರರಿಂದ ಮಾಡಿಸುತ್ತಿರುವ ಆರೋಪವೂ ಇದೆ. ನೀರಿನ ವ್ಯವಸ್ಥೆ ಸರಿಯಾಗದಿದ್ದರೆ ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೂ ದೂರು ನೀಡಲಾಗುತ್ತದೆ’ ಎಂದು ಭಾಸ್ಕರ ಪಟಗಾರ ಅವರು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ವಿಠೋಬಾ ಭಂಡಾರಿ, ಪ್ರವೀಣ್ ಅಂಬಿಗ್, ಪ್ರದೀಪ್ ಭಂಡಾರಿ, ನಾಗವೇಣಿ ಅಂಬಿಗ, ಸುಷ್ಮಾ ಭಂಡಾರಿ, ಪುಷ್ಪ ನಾಯ್ಕ, ಚರಣ್ ಬಂಡಾರಿ, ನಾಗವೇಣಿ ಅಂಬಿಗ, ಸಾಯಿನಾಥ್ ಭಂಡಾರಿ, ಶಶಿಕಲಾ ಅಂಬಿಗ, ಮಂಗಲ್ ಅಂಬಿಗ, ವಿದ್ಯಾಧರ ಅಂಬಿಗ್, ಮಮತಾ ಭಂಡಾರಿ, ಸುನೀತಾ ಭಂಡಾರಿ, ಪ್ರೇಮ ಬಂಡಾರಿ, ಪ್ರೇಮ ಭಂಡಾರಿ, ಗಿರಿಜಾ ಅಂಬಿಗ, ರಾಮಚಂದ್ರ ಅಂಬಿಗ, ಲಕ್ಷ್ಮಿ ಅಂಬಿಗ, ಸೀತಾ ಅಂಬಿಗ, ಗುಲಾಬಿ ಭಂಡಾರಿ, ವಾಸಂತಿ ಅಂಬಿಗ, ಕಲ್ಪನಾ ಭಂಡಾರಿ, ರಾಮಚಂದ್ರ ಬಂಡಾರಿ, ಮಾದೇವಿ ಅಂಬಿಗ, ಗೋಪಿ ಅಂಬಿಗ ಇದ್ದರು.