ಸರಳ ವಿವಾಹ ಉತ್ತೇಜನಕ್ಕಾಗಿ ಸರ್ಕಾರವೇ ಹೊಸ ಯೋಜನೆ ಜಾರಿಗೆ ತಂದಿದೆ. ಸರಳ ವಿವಾಹ ಆಗುವವರಿಗೆ ಹಾಗೂ ಸರಳ ವಿವಾಹ ಮಾಡಿಸುವವರಿಗೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ.
ಈಚೆಗೆ ಎಲ್ಲಡೆ ಅದ್ಧೂರಿ ಮದುವೆ ನಡೆಯುತ್ತಿದೆ. ಅನೇಕರು ಸಾಲ ಮಾಡಿ ಮಕ್ಕಳ ಮದುವೆ ಮಾಡುತ್ತಿದ್ದಾರೆ. ಐಷಾರಾಮಿಯ ಆಸೆ, ಪ್ರತಿಷ್ಠೆಯ ಸಂಕೇತದಿAದಾಗಿ ಅನಗತ್ಯ ವೆಚ್ಚದ ಆಡಂಬರದ ಕಾರ್ಯಕ್ರಮಗಳು ಹೆಚ್ಚಾಗಿದೆ. ವಧು-ವರರು ಜೀವನಪೂರ್ತಿ ಬಾಳಿ ಬದಕಲು ಬೇಕಾಗುವಷ್ಟು ಹಣ-ಒಡವೆ ಮದುವೆಯ ಒಂದು ದಿನಕ್ಕೆ ವೆಚ್ಚ ಮಾಡುವವರಿದ್ದಾರೆ. ಇಂಥ ಮದುವೆಯ ಪ್ರಮಾಣ ತಗ್ಗಿಸಲು ಸರ್ಕಾರ ಹೊಸ ಆಲೋಚನೆಯೊಂದನ್ನು ಜಾರಿಗೆ ತಂದಿದೆ.
ದುAದು ವೆಚ್ಚಗಳಿಂದ ಕೂಡಿದ ವಿವಾಹದ ಬದಲು ಸರಳ ವಿವಾಹ ಆದವರಿಗೆ ಸರ್ಕಾರ ಸಹಾಯಧನ ನೀಡುತ್ತದೆ. ಅದರೊಂದಿಗೆ ಸಾಮೂಹಿಕವಾಗಿ ಸರಳ ವಿವಾಹ ಆಯೋಜಿಸುವವರಿಗೆ ಸಹ ಸರ್ಕಾರದಿಂದ ಹಣ ಸಿಗಲಿದೆ. ಸರಳ ವಿವಾಹಕ್ಕೆ ಪ್ರೋತ್ಸಾಹ ಯೋಜನೆಯಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50 ಸಾವಿರ ರೂ ಹಾಗೂ ಸಾಮೂಹಿಕ ವಿವಾಹವನ್ನು ಆಯೋಜಿಸುವ ಆಯೋಜಕರ ಖರ್ಚು-ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 5 ಸಾವಿರ ರೂ ನೀಡಲಾಗುತ್ತದೆ.
`ಸರಳ ವಿವಾಹಕ್ಕೆ ಅರ್ಜಿ ಸಲ್ಲಿಸುವ ವಧು-ವರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ವಧುವಿಗೆ ಕನಿಷ್ಠ 18 ವರ್ಷದಿಂದÀ ಗರಿಷ್ಠ 42 ವರ್ಷ ಹಾಗೂ ವರನಿಗೆ ಕನಿಷ್ಠ 21 ವರ್ಷದಿಂದÀ ಗರಿಷ್ಠ 45 ವರ್ಷವಾಗಿರಬೇಕು. ವಧು-ವರರ ಒಟ್ಟು ವಾರ್ಷಿಕ ಆದಾಯ 5 ಲಕ್ಷ ರೂಪಾಯಿ ಒಳಗಿರಬೇಕು’ ಎಂಬ ನಿಯಮವಿದೆ. ಅದರೊಂದಿಗೆ ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಈ ಸೌಲಭ್ಯವನ್ನು ಜೀವನದಲ್ಲಿ ಒಂದು ಬಾರಿ ಮಾತ್ರ ಪಡೆಯಲು ಅವಕಾಶವಿದೆ. ಇನ್ನೂ ವರನಿಗೆ ಜೀವಂತ ಪತ್ನಿ ಅಥವಾ ವಧುಗೆ ಜೀವಂತ ಪತಿ ಇದ್ದಲ್ಲಿ ಈ ಯೋಜನೆ ಅನ್ವಯಿಸುವುದಿಲ್ಲ. ವಧು-ವರರು ಕನಿ಼ಷ್ಠ 7 ದಿನ ಮುಂಚಿತವಾಗಿ ವಿವಾಹವಾಗುವ ಸ್ಥಳದ ಜಿಲ್ಲೆಗಳಲ್ಲ್ಲಿಯೇ ಅರ್ಜಿ ಸಲ್ಲಿಸುವುದು ಅನಿವಾರ್ಯ. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ 5 ಜೋಡಿಗಳು ಭಾಗವಹಿಸಬೇಕು’ ಎಂಬ ನಿಯಮವಿದೆ.
ಸದ್ಯ ಅಲ್ಪ ಸಂಖ್ಯಾತರ ಸಮುದಾಯ ಎಂದು ಗುರುತಿಸಲಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸರಳ ವಿವಾಹಕ್ಕೆ ಪ್ರೋತ್ಸಾಹ ಯೋಜನೆ ಸಿಗಲಿದೆ. ಯಾವುದೇ ಸಮುದಾಯದ ಕನಿಷ್ಠ 5 ಜೋಡಿ ವಿವಾಹವಾದಲ್ಲಿ ಅದರಲ್ಲಿ ಮೂರು ಅಲ್ಪಸಂಖ್ಯಾತರ ಜೋಡಿಯಿದ್ದರೂ ಯೋಜನೆ ಸಿಗಲಿದೆ. ಸಮಾಜ ಸೇವಕರು, ಸಮಾಜ ಸೇವಾ ಸಂಸ್ಥೆಯವರ ಜೊತೆ ವಧು-ವರರು ಸಹ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು. ವiಂಜೂರಾದ ಪ್ರೋತ್ಸಾಹಧನದ ಹಣವನ್ನು ವಧುವಿನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಇಲಾಖಾ ಸಹಾಯವಾಣಿ ಗೆ ಫೋನ್ ಮಾಡಿ: 8277799990