ಯಲ್ಲಾಪುರದ ಗಂಟೆ ಗಣಪತಿ ಸನ್ನಿಧಿಯ ಅನತಿ ದೂರದಲ್ಲಿರುವ ಯುಕೆ ನೇಚರ್ ಸ್ಟೇ ಹೊರ ಮಂಗಳವಾರ ಸನ್ನಿವೇಶಕ್ಕೆ ಸಿದ್ಧಗೊಂಡಿದೆ. ಪ್ರಕೃತಿಯನ್ನು ಆಹ್ವಾದಿಸಿ ಬರುವ ಅತಿಥಿಗಳಿಗೆ ಊಟ-ತಿಂಡಿ ಜೊತೆ ಬರಪೂರ ಮನರಂಜನೆಯನ್ನು ನೀಡಲು ವೇದಿಕೆ ಸಜ್ಜಾಗಿದೆ. ಯಲ್ಲಾಪುರದಲ್ಲಿಯೇ ಎಲ್ಲಿಯೂ ಇಲ್ಲದ ಝಿಪ್ ಲೈನ್, ಸ್ಕೈ ಸೈಕ್ಲಿಂಗ್ ಸೇರಿದಂತೆ 11ಕ್ಕೂ ಹೆಚ್ಚು ಸಾಹಸ ಚಟುವಟಿಕೆಗಳ ಜೊತೆ ನೈಸರ್ಗಿಕವಾಗಿ ಹರಿಯುವ ಹಳ್ಳದ ಬಳಿ ಕೃತಕ ಮಳೆ ಸೃಷ್ಠಿಸಿ ಅದರಲ್ಲಿ ಮಿಂದೆಳುವ ಮೋಜಿನ ಆಟವೂ ಇಲ್ಲಿ ನಡೆಯಲಿದೆ. ಈಜು ಬಾರದಿದ್ದವರೂ ನೀರಿಗಿಳಿದು ಆಡಬಹುದಾದ ಈಜು ಕೊಳ ಇಲ್ಲಿದೆ.
ಯಲ್ಲಾಪುರ ಗ್ರಾಮ ದೇವಿ ಜಾತ್ರೆಗೆ ದಿನಾಂಕ ಘೋಷಣೆ ಆಗಿದೆ. ಜಾತ್ರೆಗೂ ಮುನ್ನ ಹೊರ ಮಂಗಳವಾರ ಆಚರಣೆ ಸಂಪ್ರದಾಯ ರೂಢಿಯಲ್ಲಿದೆ. ಜಾತ್ರೆ ಪೂರ್ವದ ಮೂರು ಮಂಗಳವಾರದ ಅವಧಿಯಲ್ಲಿ ಪಟ್ಟಣದ ಜನ ಮನೆಯಲ್ಲಿ ಇರುವ ಹಾಗಿಲ್ಲ. ಮನೆಯಿಂದ ಹೊರಗೆ ಹೋಗಿ ಸಂಜೆ ಮರಳಬೇಕು ಎಂಬ ನಿಯಮವಿದೆ. ಹೊರ ಮಂಗಳವಾರದ ಅವಧಿಯಲ್ಲಿ ಎಲ್ಲಿ ಹೋಗಬೇಕು? ಏನು ಮಾಡಬೇಕು? ಎಂದು ಯೋಚಿಸುತ್ತಿದ್ದವರನ್ನು ಯುಕೆ ನೇಚರ್ ಸ್ಟೇ ಆಮಂತ್ರಿಸುತ್ತಿದೆ. ಹೊರ ಮಂಗಳವಾರವನ್ನು ಪ್ರಕೃತಿಯ ಮಡಿಲಲ್ಲಿ ಆಚರಿಸುವ ಹೊಸ ಆಲೋಚನೆಗೆ ಇಲ್ಲಿ ವೇದಿಕೆ ಸೃಷ್ಠಿಸಲಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಅಗತ್ಯವಿರುವ ರೀತಿಯಲ್ಲಿ ಇಲ್ಲಿ ಸಮಯ ಕಳೆಯಲು ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಹೊರ ಮಂಗಳವಾರದ ದಿನ ಬರುವ ಅತಿಥಿಗಳಿಗೆ ಬೆಳಗ್ಗೆ ತಿಂಡಿ ಕೊಡಲಾಗುತ್ತದೆ. ಮಧ್ಯಾಹ್ನ ಊಟವನ್ನು ಒದಗಿಸಲಾಗುತ್ತದೆ. ಸಂಜೆ ಅಲ್ಪ ಉಪಹಾರದ ಜೊತೆ ಚಹಾ ವಿತರಣೆ ನಡೆಯುತ್ತದೆ. ಈ ಎಲ್ಲಾ ಸೌಲಭ್ಯಗಳ ಜೊತೆ ಅತಿಥಿಗಳಿಗೆ ಇನ್ನಷ್ಟು ಮನರಂಜನೆ ನೀಡಲು ವಿವಿಧ ಕಲಾವಿದರನ್ನು ಸಹ ಕರೆಯಿಸುವ ಯೋಜನೆಯಿದೆ. ಇಲ್ಲಿನ ವೇದಿಕೆಯೊಂದರಲ್ಲಿ ಭಜನೆ, ಯಕ್ಷಗಾನ, ತಾಳಮದ್ದಲೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಗತ್ಯವಿದ್ದವರಿಗೆ ಕೊಠಡಿಗಳನ್ನು ಸಹ ನೀಡಲಾಗುತ್ತದೆ.
ಶುದ್ಧ ಗಾಳಿ, ಹಸಿರು ಮರಗಳ ನಡುವೆ ಮಕ್ಕಳ ಜೊತೆ ಕಾಲ ಕಳೆಯಲು ಯುಕೆ ನೇಚರ್ ಸ್ಟೇ ಉತ್ತಮ ತಾಣ. ನೀರು-ನೆರಳು ಸಮೃದ್ಧವಾಗಿರುವ ಈ ಪ್ರದೇಶದಲ್ಲಿ ದಿನವಿಡೀ ಆಟ-ಊಟದ ಜೊತೆ ವಿಶ್ರಾಂತಿಪಡೆದು ಮರಳುವವರಿಗೆ ಇನ್ನಷ್ಟು ಚೈತನ್ಯ ನೀಡಲು ನಿರಂಜನ ಭಟ್ಟ ದಂಪತಿ ಶ್ರಮಿಸುತ್ತಿದ್ದಾರೆ. 2026ರ ಜನವರಿ 20, ಜನವರಿ 27 ಹಾಗೂ ಫೆಬ್ರವರಿ 3ರಂದು ಯಲ್ಲಾಪುರದಲ್ಲಿ ಹೊರ ಮಂಗಳವಾರದ ಆಚರಣೆ ನಡೆಯಲಿದೆ. ಈ ಮೂರು ದಿನದ ಅವಧಿಯಲ್ಲಿ ಯುಕೆ ನೇಚರ್ ಸ್ಟೇ ಬರಲು ಬಯಸುವ ವಯಸ್ಕರಿಗೆ 500ರೂ ಶುಲ್ಕವಿದೆ. 5ರಿಂದ 12 ವರ್ಷದ ಮಕ್ಕಳಿಗೆ 250ರೂ ಶುಲ್ಕ ವಿಧಿಸಲಾಗುತ್ತದೆ. 5ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣ ಉಚಿತ ಪ್ರವೇಶ. ಊಟ-ತಿಂಡಿಯ ಜೊತೆ ಬಗೆ ಬಗೆಯ ಕ್ರೀಡೆ ಹಾಗೂ ಮನರಂಜನೆಗೆ ಪ್ರತ್ಯೇಕ ಶುಲ್ಕ ಪಾವತಿ ಮಾಡಬೇಕಿಲ್ಲ.
ಇನ್ನೂ ಏನಾದರೂ ಅನುಮಾನಗಳಿದ್ದರೆ ಇಲ್ಲಿ ಮೆಸೆಜ್ ಮಾಡಿ: 9449567673

#Sponsored