ಕುಮಟಾ ಹಿರೆಗುತ್ತಿಯ ಚಂದ್ರಕಾoತ್ ಮಸಾಕಲ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಚಂದ್ರಕಾoತ್ ಮಸಾಕಲ್ ಅವರು ಪೊಲೀಸ್ ಸಿಬ್ಬಂದಿ ಆಗಿದ್ದು, ಕಳ್ಳರು ಅವರ ಮನೆಗೆ ನುಗ್ಗಿ 6 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚುವ ಧೈರ್ಯ ಮಾಡಿದ್ದಾರೆ.
ಜನವರಿ 10ರಂದು ಚಂದ್ರಕಾoತ್ ಮಸಾಕಲ್ ಅವರು ಮನೆಯಲ್ಲಿರಲಿಲ್ಲ. ಅವರ ಮನೆಯಲ್ಲಿ ಆ ಅವಧಿಯಲ್ಲಿ ಯಾರೂ ಇರಲಿಲ್ಲ. ಈ ವಿಷಯ ಅರಿತ ಕಳ್ಳರು ಅವರ ಮನೆ ಬಾಗಿಲು ಮುರಿದು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಬೆಳಗ್ಗೆ 9ರಿಂದ 12 ಗಂಟೆ ಅವಧಿಯಲ್ಲಿ ಈ ಕಳ್ಳತನ ನಡೆದಿದ್ದರೂ ಆ ಅವಧಿಯಲ್ಲಿ ಯಾರಿಗೂ ಗೊತ್ತಾಗಲಿಲ್ಲ.
ಪೊಲೀಸ್ ಸಿಬ್ಬಂದಿ ಮನೆಗೆ ನುಗ್ಗಿದ ಕಳ್ಳರಿಗೆ 2.80 ಲಕ್ಷ ರೂ ಮೌಲ್ಯದ ಬಂಗಾರದ ಬಳೆ, 3 ಲಕ್ಷ ರೂ ಮೌಲ್ಯದ ಚಿನ್ನದ ಕರಿಮಣಿ ಸರ, 80 ಸಾವಿರ ರೂ ಮೌಲ್ಯದ ಕಿವಿಯೋಲೆ ಸಿಕ್ಕಿದೆ. ಮನೆ ಕಳ್ಳತನಕ್ಕಾಗಿ ಬಂದಿದ್ದ ಆ ಕಳ್ಳರು ಮನೆಯ ಪ್ರಧಾನ ಬಾಗಿಲಿಗೂ ಹಾನಿ ಮಾಡಿದ್ದಾರೆ. ಬೆಡ್ ರೂಮಿನ ಸೇಫ್ ಲಾಕರಿನಲ್ಲಿರಿಸಿದ್ದ ಚಿನ್ನವನ್ನು ಕಳ್ಳರು ದೋಚಿದ್ದಾರೆ.
ಆ ಅಪರಿಚಿತ ಕಳ್ಳರ ವಿರುದ್ಧ ಚಂದ್ರಕಾAತ್ ಮಸಾಕಲ್ ಅವರು ದೂರು ನೀಡಿದ್ದಾರೆ. ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ, ಡಿವೈಎಸ್‌ಪಿ ಮಹೇಶ ಎಂ ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳವೂ ಆಗಮಿಸಿ ಶೋಧ ನಡೆಸಿದೆ. ಗೋಕರ್ಣ ಪಿಐ ಶ್ರೀಧರ ಎಸ್. ಆರ್ ಹಾಗೂ ಪಸೈ ಖಾದರ್ ಬಾಷಾ, ಶಶಿಧರ ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ.
`ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಅಳವಡಿಸಿ’