ಸಿದ್ದಾಪುರ ಗರಿಗಡ್ಡೆಯಲ್ಲಿ ಮಹೇಶ ನಾಯ್ಕ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಸಾವಿನಲ್ಲಿ ಅನೇಕ ಅನುಮಾನಗಳುವ್ಯಕ್ತವಾಗಿದೆ.
ಸಿದ್ದಾಪುರದ ನೆಲ್ಲಿಮಡ್ಕಿ ಬಳಿ ಮಹೇಶ ವೆಂಕಟ್ರಮಣ ನಾಯ್ಕ (33) ಅವರು ವಾಸವಾಗಿದ್ದರು. ಬುಧವಾರ ಬೆಳಗ್ಗೆ ಹಳ್ಳಿಕಾನದಿಂದ ನೆಲ್ಲಿಮಡ್ಕಿಯ ಮನೆ ಕಡೆ ಅವರು ಬೈಕಿನಲ್ಲಿ ಬರುತ್ತಿದ್ದರು. ಗಿರಗಡ್ಡೆ ರಸ್ತೆ ಮದ್ಯೆ ಅವರ ಬೈಕ್ ಬಿದ್ದಿರುವುದನ್ನು ನೋಡಿದ ಜನ ಕಾಡಿನ ಕಡೆ ಕಣ್ಣಾಯಿಸಿದರು. ಗುಡ್ಡದ ಮೇಲಿರುವ ವಿದ್ಯುತ್ ಕಂಬಕ್ಕೆ ಮಹೇಶ ನಾಯ್ಕ ಅವರು ನೇತಾಡುತ್ತಿರುವುದು ಕಾಣಿಸಿತು.
ಮಹೇಶ ನಾಯ್ಕ ಅವರ ಮೈ ಮೇಲೆ ಪೂರ್ಣ ಪ್ರಮಾಣದಲ್ಲಿ ಬಟ್ಟೆಗಳಿರಲಿಲ್ಲ. ಮಹೇಶ ನಾಯ್ಕ ಅವರು ಹೀಗೆ ಆತ್ಮಹತ್ಯೆಗೆ ಶರಣಾಗುವ ಚಂಚಲ ಮನಸ್ಸಿನವರು ಸಹ ಆಗಿರಲಿಲ್ಲ. ಅದರಲ್ಲಿಯೂ ಮನೆಗೆ ಮರಳುತ್ತಿದ್ದ ಮಹೇಶ ನಾಯ್ಕ ಅವರ ಬೈಕ್ ರಸ್ತೆ ಮೇಲೆ ಬಿದ್ದಿರುವುದು ಹಾಗೂ ಅವರು ವಿದ್ಯುತ್ ಕಂಬಕ್ಕೆ ನೇತಾಡುತ್ತಿರುವುದು ಸಂಶಯಕ್ಕೆ ಕಾರಣವಾಯಿತು. ಹೀಗಾಗಿ ಕುಟುಂಬದವರು ಈ ಸಾವಿನ ಬಗ್ಗೆ ಅನುಮಾನವ್ಯಕ್ತಪಡಿಸಿದರು.
ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್, ಸಿದ್ದಾಪುರ ಪಿಐ ಸೀತಾರಾಮ ಬಿ ಜೆ ಹಾಗೂ ಪಿಸೈ ಶಾಂತಿನಾಥ ಪಾಸಾನೆ ಸದ್ಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಾವಿನ ಬಗ್ಗೆ ತನಿಖೆ ಶುರುವಾಗಿದೆ.