ಗಂಟಲು ಕಾನ್ಸರಿನಿಂದ ನೋವು ಅನುಭವಿಸುತ್ತಿದ್ದ ಭಟ್ಕಳದ ತಿಮ್ಮಪ್ಪ ಗೊಂಡ ಅವರು ರಾಗಿ ಗಂಜಿಯಲ್ಲಿ ವಿಷ ಬೆರೆಸಿ ಕುಡಿದಿದ್ದಾರೆ. ನಿರಂತರ 17 ತಾಸು ಚಿಕಿತ್ಸೆ ಮಾಡಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಭಟ್ಕಳದ ಜಾಲಿಯಲ್ಲಿ ತಿಮ್ಮಪ್ಪ ಮಂಗಳ ಗೊಂಡ (51) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಬದುಕು ನಡೆಸುತ್ತಿದ್ದರು. ವರ್ಷದ ಹಿಂದೆ ಅವರಿಗೆ ಕಾನ್ಸರ್ ಕಾಣಿಸಿಕೊಂಡಿತು. ಗಂಟಲು ಕಾನ್ಸರ್ ಸಮಸ್ಯೆ ಅನುಭವಿಸಿದ ತಿಮ್ಮಪ್ಪ ಗೊಂಡ ಅವರು ಮಂಗಳೂರು ಹಾಗೂ ಮಣಿಪಾಲ್’ಗೆ ಹೋಗಿ ಚಿಕಿತ್ಸೆಪಡೆಯುತ್ತಿದ್ದರು. ಪರಿಣಾಮ ಅವರು ದುಡಿದ ಹಣ ಖಾಲಿಯಾಯಿತೇ ವಿನಃ ಕಾನ್ಸರ್ ದೂರವಾಗಲಿಲ್ಲ.
ತಿಮ್ಮಪ್ಪ ಗೊಂಡ ಅವರು ಅಪಾರ ಪ್ರಮಾಣದಲ್ಲಿ ಗಂಟಲು ನೋವು ಅನುಭವಿಸಿದರು. ಆ ನೋವು ಸಹಿಸಲಾಗದೇ ಜೀವನದಲ್ಲಿಯೂ ಬೇಸರಗೊಂಡಿದ್ದರು. ಜನವರಿ 14ರ ಸಂಜೆ ಅವರು ತಾವು ಸೇವಿಸುವ ರಾಗಿ ಗಂಜಿಯಲ್ಲಿ ಇಲಿ ಪಾಷಣದ ಪೇಸ್ಟ್ ಬೆರೆಸಿದರು. ಅದನ್ನು ಅವರು ಸೇವಿಸಿ ಅಸ್ವಸ್ಥರಾದರು. ತಿಮ್ಮಪ್ಪ ಗೊಂಡ ಅವರನ್ನು ಕುಟುಂಬದವರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಅವರನ್ನು ಬದುಕಿಸುವ ಪ್ರಯತ್ನ ನಡೆದರೂ ಪ್ರಯೋಜನಕ್ಕೆ ಬರಲಿಲ್ಲ. ಈ ವಿಷಯದ ಬಗ್ಗೆ ತಿಮ್ಮಪ್ಪ ಗೊಂಡ ಅವರ ಪುತ್ರ ಮಹೇಶ ಗೊಂಡ ಅವರು ಮಾಹಿತಿ ನೀಡಿದರು.
`ಆತ್ಮಹತ್ಯೆ ಅಪರಾಧ’