ಭಟ್ಕಳದ ಶ್ರೀಧರ ನಾಯ್ಕ ಅವರ ತೋಟದ ಕೆಲಸಕ್ಕೆ ಹೋಗಿದ್ದ ಮೋಹನ ನಾಯ್ಕ ಅವರು ಅಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾರೆ.
ಭಟ್ಕಳದ ಮುಂಡಳ್ಳಿ ಡಿ ಪಿ ಕಾಲೋನಿಯಲ್ಲಿ ಮೋಹನ ನಾರಾಯಣ ನಾಯ್ಕ (55) ಅವರು ವಾಸವಾಗಿದ್ದರು. ಅವರಿವರ ಮನೆಯ ಕೂಲಿ ಕೆಲಸಕ್ಕೆ ಹೋಗಿ ಅವರು ಬದುಕು ಕಟ್ಟಿಕೊಂಡಿದ್ದರು. ಜನವರಿ 17ರ ಬೆಳಗ್ಗೆ 8 ಗಂಟೆಗೆ ಮೋಹನ ನಾಯ್ಕ ಅವರು ಶ್ರೀಧರ ಶನಿಯಾರ ನಾಯ್ಕ ಅವರ ತೋಟಕ್ಕೆ ಹೋಗಿದ್ದರು.
ಶ್ರೀಧರ ನಾಯ್ಕ ಅವರ ಸೂಚನೆ ಮೇರೆಗೆ ಅಲ್ಲಿ ಅಡಿಕೆ ಹಾಗೂ ತೆಂಗಿನ ಮರದ ಬುಡ ಸರಿಪಡಿಸುವ ಕೆಲಸ ಮಾಡುತ್ತಿದ್ದರು. ಕೆಲ ಸಮಯದ ನಂತರ ಮೋಹನ ನಾಯ್ಕ ಅವರು ದಿಢೀರ್ ಆಗಿ ಕುಸಿದು ಬಿದ್ದರು. ಅಲ್ಪ ಪ್ರಮಾಣದಲ್ಲಿ ಉಪಚಾರ ಮಾಡಿ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.
ವೈದ್ಯರು ಪರಿಕ್ಷಿಸುವುದರೊಳಗೆ ಮೋಹನ ನಾಯ್ಕ ಅವರು ಸಾವನಪ್ಪಿದ್ದರು. ಮೋಹನ ನಾಯ್ಕ ಅವರ ಪುತ್ರ ಲೋಕನಾಥ ನಾಯ್ಕ ಅವರು ಈ ಬಗ್ಗೆ ಮಾಹಿತಿ ನೀಡಿದರು.