ಶಿರಸಿಯಲ್ಲಿ ವಾಸವಾಗಿದ್ದ ಕುಮಟಾದ ಪುರಂದರ ಪಟಗಾರ ಅವರು ಹೊಟ್ಟೆ ನೋವಿನಿಂದ ಸಾವನಪ್ಪಿದ್ದಾರೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ.
ಕುಮಟಾ ಮಾಸೂರು ಬಳಿಯ ಹೊಸಕೇರಿಯ ಪುರಂದರ ಹೊನ್ನಪ್ಪ ಪಟಗಾರ ಅವರು ಸದ್ಯ ಶಿರಸಿಯ ಸೋಂದಾ ಬಳಿಯ ಮೊಗದ್ದೆಯಲ್ಲಿ ವಾಸವಾಗಿದ್ದರು. 10 ವರ್ಷಗಳ ಹಿಂದೆ ಮಾನಸಿಕ ಕಾಯಿಲೆಗೆ ಒಳಗಾಗಿದ್ದ ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಅಲ್ಲಿನ ವೈದ್ಯರು ನೀಡಿದ ಮೂರು ಮಾತ್ರೆಗಳನ್ನು ಅವರು ಸೇವಿಸುತ್ತಿದ್ದರು.
ಹೀಗಿರುವಾಗ ಜನವರಿ 6ರ ಸಂಜೆ ಪುರಂದರ ಪಟಗಾರ ಅವರಿಗೆ ಹೊಟ್ಟೆನೋವು ಕಾಣಿಸಿತು. ಶಿರಸಿ ಸರ್ಕಾರಿ ಆಸ್ಪತ್ರೆಗೆ ಅವರನ್ನು ಕರೆತಂದು ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅವರ ನೋವು ಮಾತ್ರ ಕಡಿಮೆ ಆಗಲಿಲ್ಲ. ಹೀಗಾಗಿ ಕುಟುಂಬದವರು ಪುರಂದರ ಪಟಗಾರ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ಚಿಕಿತ್ಸೆಯೂ ಪ್ರಯೋಜನಕ್ಕೆ ಬರಲಿಲ್ಲ. ಜನವರಿ 21ರಂದು ಅವರು ಸಾವನಪ್ಪಿದರು. ಪರಂದರ ಪಟಗಾರ ಅವರ ಪತ್ನಿ ಸರೋಜಾ ಪಟಗಾರ ಅವರು ಈ ಬಗ್ಗೆ ಮಾಹಿತಿ ನೀಡಿದರು.