ಭಟ್ಕಳದಲ್ಲಿ ವಾಸವಾಗಿರುವ ಅಂಕೋಲಾದ ಶಿಕ್ಷಕರೊಬ್ಬರಿಗೆ ಮೋಸವಾಗಿದೆ. ಒಳ್ಳೆಯ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ವಂಚಕರು ಹಣಪಡೆದು ಮೋಸ ಮಾಡಿದ್ದಾರೆ.
ಅಂಕೋಲಾ ಅಂಕೋಲಾ ಹುಲಿದೇವರವಾಡದ ಮದಿಯಾ ಮಹಬೂಬ್ ಸಾಬ್ ಭೇಪಾರಿ ಅವರು ಸದ್ಯ ಭಟ್ಕಳದ ಹನೀಪಾಬಾದಿನ ಶಮ್ಸ ಸ್ಕೂಲ್ ಹತ್ತಿರ ವಾಸವಾಗಿದ್ದಾರೆ. 21 ವರ್ಷದ ಅವರು ಸದ್ಯ ಶಿಕ್ಷಕರಾಗಿದ್ದು, ದೊಡ್ಡ ದೊಡ್ಡ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಮದಿಯಾ ಸಾಬ್ ಅವರ ಉದ್ಯೋಗ ಹುಡುಕಾಟದ ಬಗ್ಗೆ ಅರಿತ ವಂಚಕರು ಅವರಿಗೆ ಒಳ್ಳೆಯ ಉದ್ಯೋಗದ ಆಮೀಷ ಒಡ್ಡಿ ಹಣಪಡೆದಿದ್ದಾರೆ. ಆದರೆ, ಉದ್ಯೋಗ ನೀಡದೇ ವಂಚಿಸಿದ್ದಾರೆ.
ಮದಿಯಾ ಸಾಬ್ ಅವರಿಗೆ ಆನ್‌ಲೈನ್ ಮೂಲಕ ಅಪರಿಚಿತ ಉದ್ಯೋಗದಾತರು ಪರಿಚಯವಾಗಿದ್ದಾರೆ. ಒಳ್ಳೆಯ ಸಂಬಳ ಕೊಡುವ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾರೆ. ಇದಕ್ಕಾಗಿ ಕೊಂಚ ಹಣ ಖರ್ಚು ಮಾಡಬೇಕು ಎಂದು ತಿಳಿಸಿ ಫೋನ್ ಪೇ ಸ್ಕಾನರ್ ಕಳುಹಿಸಿದ್ದಾರೆ. ಅದರ ಮೂಲಕ ಮದಿಯಾ ಸಾಬ್ ಅವರಿಂದ 36492ರೂ ವಸೂಲಿ ಮಾಡಿದ್ದಾರೆ.
ನಂತರ ಹಣಪಡೆದವರು ಕೈಗೆ ಸಿಕ್ಕಿಲ್ಲ. ಅವರು ಯಾರು? ಎಂದು ಸಹ ಮದಿಯಾ ಸಾಬ್ ಅವರಿಗೆ ಗೊತ್ತಾಗಿಲ್ಲ. ಹೀಗಾಗಿ ಮೋಸ ಮಾಡಿದವರ ವಿರುದ್ಧ ಸಿಡಿದೆದ್ದ ಮದಿಯಾ ಸಾಬ್ ಅವರು ಪೊಲೀಸರಿಗೆ ದೂರಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.
`ಅಪರಿಚಿತರ ಬಗ್ಗೆ ಎಚ್ಚರಿಕೆವಹಿಸಿ’