ಅತ್ಯಂತ ಉತ್ಸಾಹದಿಂದಲೇ ಬದುಕು ನಡೆಸುತ್ತಿದ್ದ ಗೋಕರ್ಣದ ಅನಂತ ಅಡಿ ದಿಢೀರ್ ಆಗಿ ದುಡುಕಿನ ನಿರ್ಧಾರ ಮಾಡಿದ್ದಾರೆ. ಅರ್ದ ಆಯಸ್ಸಿಗೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗೋಕರ್ಣದ ರಥಬೀದಿಯಲ್ಲಿ ಅನಂತ ರಾಮಕೃಷ್ಣ ಅಡಿ (56) ಅವರು ವಾಸವಾಗಿದ್ದರು. ಯಂಗ್ ಸ್ಟಾರ್ ಕ್ಲಬ್ ಸದಸ್ಯರಾಗಿದ್ದ ಅವರು ಸಂಸ್ಥೆ ಅಭಿವೃದ್ಧಿಗೆ ಶ್ರಮಿಸಿದ್ದರು. ಯಕ್ಷಪ್ರೇಮಿ ಆಗಿದ್ದ ಅವರು ಪ್ರತಿ ವರ್ಷ ವಿವಿಧ ಕಡೆ ಯಕ್ಷಗಾನ ಪ್ರದರ್ಶನ ಆಯೋಜಿಸುತ್ತಿದ್ದರು. ಸಾಹಿತ್ಯ, ಸಮ್ಮೇಳನಗಳಲ್ಲಿಯೂ ಅನಂತ ಅಡಿ ಅತ್ಯಂತ ಉತ್ಸಾಹದಿಂದ ತೊಡಗಿಕೊಳ್ಳುತ್ತಿದ್ದರು. ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿಯೂ ಮುಂಚೂಣಿಯಲ್ಲಿರುತ್ತಿದ್ದರು.
ಅತ್ಯAತ ಸರಳ ಹಾಗೂ ಶಾಂತ ಸ್ವಭಾವದ ಅನಂತ ಅಡಿ ಅವರು ಶುಕ್ರವಾರ ಏಕಾಏಕಿ ದುಡುಕಿನ ನಿರ್ಧಾರ ಮಾಡಿದರು. ಮನೆಯಲ್ಲಿಯೇ ಅವರು ನೇಣಿಗೆ ಶರಣಾದರು. ಮಾನಸಿಕವಾಗಿ ಕೊರಗುತ್ತಿದ್ದ ಅವರು ಆ ಕೊರಗನ್ನು ಯಾರಲ್ಲಿಯೂ ಹೇಳಿಕೊಳ್ಳಲಾಗದೇ ಕೊನೆಯುಸಿರೆಳೆದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
`ಆತ್ಮಹತ್ಯೆ ಅಪರಾಧ’