ಕುಮಟಾದ – ಹೊನ್ನಾವರ ಹೆದ್ದಾರಿಯಲ್ಲಿನ ಅವೈಜ್ಞಾನಿಕ ಹಂಪ್ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದೆ. ಬೈಕು ಹಂಪ್ ಹಾರಿದ ವೇಗಕ್ಕೆ ಸಹ ಸವಾರರೊಬ್ಬರು ನೆಲಕ್ಕೆ ಬಿದ್ದು ಸಾವಪ್ಪಿದ್ದಾರೆ.
ಕುಮಟಾ ಪಟ್ಟಣದ ಪಶು ಆಸ್ಪತ್ರೆ ಎದುರು ಹಾದುಹೋದ ಹೆದ್ದಾರಿಯಲ್ಲಿ ನಾಲ್ಕು ಚಿಕ್ಕ ಚಿಕ್ಕ ಹಂಪುಗಳಿವೆ. ಆ ಹಂಪುಗಳಿಗೆ ಬಣ್ಣ ಬಡಿದಿಲ್ಲ. ವೈಜ್ಞಾನಿಕ ವಿಧಾನದಲ್ಲಿಯೂ ಆ ಹಂಪುಗಳಿಲ್ಲ. ಹೀಗಾಗಿ ಇಲ್ಲಿ ಪದೇ ಪದೇ ಅಪಘಾತಗಳಾಗುತ್ತಿದ್ದು, ಮೊನ್ನೆ ರಾತ್ರಿ ನಡೆದ ಅಪಘಾತದಲ್ಲಿ 23 ವರ್ಷದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. 19 ವರ್ಷದ ವಿದ್ಯಾರ್ಥಿಯೊಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಕುಮಟಾ ಮಿರ್ಜಾನಿನ ವಿಕಾಸ ಮಧುಕರ ಪಟಗಾರ (19) ಅವರು ಶುಕ್ರವಾರ ರಾತ್ರಿ ಕುಮಟಾ ಮಾಸ್ತಿಕಟ್ಟೆ ಸರ್ಕಲ್ ಕಡೆಯಿಂದ ಹೊನ್ನಾವರ ಕಡೆ ಓಡಿದ ಬೈಕು ಓಡಿಸುತ್ತಿದ್ದರು. ಆ ಬೈಕಿನಲ್ಲಿ ಹೊಲನಗದ್ದೆಯ ಕಿರಣ ಶಿವಾನಂದ ಪಟಗಾರ (23) ಅವರು ಜೊತೆಯಿದ್ದರು. ಬೈಕು ವೇಗವಾಗಿ ಬಂದಿದ್ದು, ಹಂಪು ಹಾರಿತು. ಪರಿಣಾಮ ಶಿಲ್ಪಿಯಾಗಿದ್ದ ಕಿರಣ ಪಟಗಾರ ಅವರು ಬೈಕಿನಿಂದ ನೆಲಕ್ಕೆ ಬಿದ್ದು ಕೊನೆಯುಸಿರೆಳೆದರು. ವಿಕಾಸ ಪಟಗಾರ ಅವರು ಸಹ ಈ ಅಪಘಾತದಲ್ಲಿ ಪೆಟ್ಟು ಮಾಡಿಕೊಂಡರು. ಅಪಘಾತದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದರು.