ದಾಂಡೇಲಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಗಲಾಟೆ ನಡೆದಿದೆ. ನಿಶ್ಚಿತಾರ್ಥಕ್ಕೆ ಬಂದವರು ದೊಡ್ಡ ಜಗಳವಾಡಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಜನವರಿ 22ರಂದು ತೋಹಿದ್ ಶಾಲೆಯ ಮುಂದಿನ ಮೈದಾನದಲ್ಲಿ ವಿವಾಹ ನಿಶ್ಚಯ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಆ ಕಾರ್ಯಕ್ರಮ ಮುಗಿಯುವಾಗ ರಾತ್ರಿ ಆಗಿದ್ದು, ರಾತ್ರಿ 11 ಗಂಟೆ ವೇಳೆಗೆ ಅಲ್ಲಿ ಗಲಾಟೆ ಶುರುವಾಯಿತು. ಎರಡು ಗುಂಪಿನ ಜನ ಪರಸ್ಪರ ಕೂಗಿ ಜಗಳ ಶುರು ಮಾಡಿದರು. ನಡುವೆ ಅವರಿವರ ನಡುವೆ ವಾಗ್ವಾದ ಜೋರಾಗಿದ್ದು, ಅದು ಹೊಡೆದಾಟದ ಸ್ವರೂಪಪಡೆಯಿತು.
ದಾಂಡೇಲಿ ಗಾಂಧೀನಗರ ರಾಮ ಅಶೋಕ ಕಂಜರಬಾಟ್, ಸುನಿಲ ಅನಿಲ ಕಂಜರಬಾಟ್, ರೋಹನ್ ಇಂದ್ರಜಿತ್ ಕಂಜರಬಾಟ್ ಹಾಗೂ ಕಿರಣ ಅನಿಲ ಕಂಜರಬಾಟ್ ಸೇರಿ ಗಲಾಟೆ ಶುರು ಮಾಡಿದರು. ಗಾಂಧೀನಗರದ ಕಂಜರಬಾಟಿನ ದೀಪಕ ಸೂರ ಕಂಜರಬಾಟ್, ಪೃಮ ಜಿತೇಂದ್ರ ಕಂಜರಬಾಟ್, ಗಣೇಶ ದೀಪಕ ಕಂಜರಬಾಟ್, ರಿಹಾನ್ ಸುಧೀರ ಕಂಜರಬಾಟ್, ಸುಮೀತ ಸೂರಜ ಕಂಜರಬಾಟ್ ಅವರ ಜೊತೆ ಚಾಂದಿನಿ ದೀಪಕ ಕಂಜರಬಾಟ್, ಆಸ್ಮಾ ದೀಪಕ ಕಂಜರಬಾಟ್, ರೇಷ್ಮಾ ಸುಧೀರ ಕಂಜರಬಾಟ್ ಈ ಜಗಳವನ್ನು ದೊಡ್ಡದಾಗಿ ಮಾಡಿದರು.
ಈ ಗಲಾಟೆ ಬಗ್ಗೆ ಅರಿತ ದಾಂಡೇಲಿ ನಗರ ಪೊಲೀಸ್ ಠಾಣೆ ಎಸೈ ಮಂಜುನಾಥ ದೇಮಟಿ ಅವರು ಅಲ್ಲಿಗೆ ಧಾವಿಸಿದರು. ಆ ಎರಡು ಕಡೆಯವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಪೊಲೀಸರ ಮುಂದೆಯೇ ಎರಡು ಗುಂಪಿನವರು ಕೈ ಕೈ ಮಿಲಾಯಿಸಿಕೊಂಡಿದ್ದು, ಶಾಂತತಾ ಭಂಗ ಮಾಡಿದ ಕಾರಣ ಆ 12 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.