ಯಲ್ಲಾಪುರದಲ್ಲಿ ಪೇಂಟಿoಗ್ ಕೆಲಸ ಮಾಡಿಕೊಂಡಿದ್ದ ಪುನೀತ ಅರಸಿನಗೋಡಿ ಅವರು 22ನೇ ವಯಸ್ಸಿನಲ್ಲಿಯೇ ತಮ್ಮ ಬದುಕನ್ನು ಅಂತ್ಯಗೊಳಿಸಿದ್ದಾರೆ. ನಾಲ್ಕು ವಿದ್ಯುತ್ ವೈಯರ್ ಜೋಡಿಸಿದ ಅವರು ಅದನ್ನೇ ಹಗ್ಗದ ರೀತಿ ಬಳಸಿ ನೇಣಿಗೆ ಶರಣಾಗಿದ್ದಾರೆ.
ಯಲ್ಲಾಪುರದ ಕಾಳಮ್ಮ ನಗರದಲ್ಲಿ ಪುನೀತ ಅರಸಿನಗೋಡಿ ಅವರು ವಾಸವಾಗಿದ್ದರು. ಪುನೀತ ಅವರ ತಂದೆ ಪ್ರಭಾಕರ ಅರಶಿನಕೋಡಿ ಅವರು ಮುಂಡಗೋಡಿನ ಬಿಸಿಎಂ ಹಾಸ್ಟೇಲ್‌ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ಪುನೀತ ಅವರು ಯಲ್ಲಾಪುರದಲ್ಲಿ ಪೇಟಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಅವರಿಬ್ಬರ ದುಡಿಮೆ ಕುಟುಂಬಕ್ಕೆ ಆಧಾರವಾಗಿತ್ತು.
ಈ ನಡುವೆ ಪುನೀತ ಅರಸಿನಗೋಡಿ (22) ಮಂಕಾಗಿದ್ದರು. ಮಾನಸಿಕವಾಗಿ ಅವರು ಕುಗ್ಗಿದ್ದರು. ಆದರೆ, ಅದಕ್ಕೆ ಕಾರಣ ಏನು? ಎಂಬುದು ಗೊತ್ತಾಗಿರಲಿಲ್ಲ. ಜನವರಿ 28ರಂದು ಜನ ಪುನೀತ ಅವರನ್ನು ಕೊನೆಯದಾಗಿ ನೋಡಿದ್ದರು. ಜನವರಿ 29ರ ಸಂಜೆ ಅವರು ಸಾವನಪ್ಪಿರುವ ವಿಷಯ ಹೊರಬಂದಿತು.
ಕಾಳಮ್ಮ ನಗರದಲ್ಲಿರುವ ವಾಸದ ಮನೆಯಲ್ಲಿಯೇ ಪುನೀತ ಅರಸಿನಗೋಡಿ ದುಡುಕು ನಿರ್ಧಾರ ಮಾಡಿದ್ದರು. ಮನೆಯಲ್ಲಿದ್ದ 4 ವಿದ್ಯುತ್ ವೈಯರ್ ಒಟ್ಟಿಗೆ ಜೋಡಿಸಿ ಅದನ್ನು ಫ್ಯಾನಿನ ಹುಕ್ಕಿಗೆ ಸಿಕ್ಕಿಸಿದ್ದು, ಅದಕ್ಕೆ ಕುತ್ತಿಗೆ ಕೊಡ್ಡಿದರು. ಕುಟುಂಬದವರು ನೋಡುವುದರೊಳಗೆ ಪುನೀತ ಅರಸಿನಗೋಡಿ ಶವವಾಗಿದ್ದರು.