ದಾಂಡೇಲಿಯಲ್ಲಿ ಮನೆಯ ಮೇಲೆ ಮರ ಬಿದ್ದಿದ್ದು, ಮನೆಯೊಳಗೆ ಇದ್ದ ವ್ಯಕ್ತಿಯೊಬ್ಬರಿಗೆ ಭಾರೀ ಪ್ರಮಾಣದ ಗಾಯವಾಗಿದೆ. ಮರ ಬಿದ್ದ ರಭಸಕ್ಕೆ ಮನೆಯ ಮೇಲ್ಚಾವಣಿ ಮನುಷ್ಯನ ಮೇಲೆ ಬಿದ್ದಿದ್ದರಿಂದ ಮಹಿಳೆಯೊಬ್ಬರು ಆಸ್ಪತ್ರೆ ಸೇರಿದ್ದಾರೆ.
ಹಳೆ ದಾಂಡೇಲಿಯಲ್ಲಿ ಮಹಮ್ಮದ್ ಗೌಸ್ ತಿಗಡಿ ಅವರು ವಾಸವಾಗಿದ್ದರು. ಅವರ ಮನೆ ಪಕ್ಕ ಅಪಾಯಕಾರಿ ರೀತಿಯಲ್ಲಿ ಮಾವಿನ ಮರವಿತ್ತು. ಆ ಮರ ಕಟಾವು ಬಗ್ಗೆ ಅವರು ಚಿಂತಿಸಿರಲಿಲ್ಲ. ರೆಂಬೆ-ಕೊAಬೆಗಳನ್ನು ಸಹ ಕಟಾವು ಮಾಡಿರಲಿಲ್ಲ. ಹೀಗಾಗಿ ಆ ಮರ ಮನೆಯ ಮೇಲೆ ಬಿದ್ದಿದ್ದು, ಮನೆಯ ಮೇಲ್ಚಾವಣಿಯನ್ನು ಮುರಿಯಿತು.
ಈ ವೇಳೆ ಮಹಮ್ಮದ್ ಗೌಸ್ ತಿಗಡಿ ಅವರ ಮನೆಯಲ್ಲಿ ಮಹಿಳೆಯೊಬ್ಬರು ಇದ್ದು, ಅವರ ತಲೆ ಮೇಲೆ ಮೇಲ್ಚಾವಣಿ ಕುಸಿಯಿತು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಮಹಿಳೆಯನ್ನು ಅಕ್ಕಪಕ್ಕದಲ್ಲಿದ್ದವರು ರಕ್ಷಿಸಿದರು. ಸಿಮೆಂಟ್ ಶೀಟ್ ಬಿದ್ದ ಕಾರಣ ಮಹಿಳೆ ತಲೆಭಾಗದಿಂದ ರಕ್ತ ಬಂದಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮನೆಗೂ ಅಲ್ಲಲ್ಲಿ ಹಾನಿ ಉಂಟಾಗಿದೆ.