ಕಾರವಾರದ ಕೋರ್ಟನ್ನು ಸ್ಪೋಟಿಸುವುದಾಗಿ ವ್ಯಕ್ತಿಯೊಬ್ಬರು ಬೆದರಿಕೆ ಒಡ್ಡಿದ್ದಾರೆ. ಇಮೇಲ್ ಮೂಲಕ ಈ ಬೆದರಿಕೆ ಬಂದಿದೆ.
Advertisement. Scroll to continue reading.
ಸದ್ಯ ಕಾರವಾರ ಕೋರ್ಟಿನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಪೊಲೀಸರು ಕೋರ್ಟಿನ ಮೂಲೆ ಮೂಲೆಯನ್ನು ಶೋಧ ಮಾಡಿದ್ದಾರೆ. ಈ ವೇಳೆ ಎಲ್ಲಿಯೂ ಬಾಂಬ್ ಕಾಣಿಸಿಲ್ಲ.
ಕಾರವಾರ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆಡಳಿತ ಕಚೇರಿಯ ಕಂಪ್ಯೂಟರ್ ವಿಭಾಗಕ್ಕೆ ಬೆಳಗ್ಗೆ 8.25ಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ. `ಕೋರ್ಟಿನಲ್ಲಿರುವ ಎಲ್ಲರನ್ನು 12.15ರ ಒಳಗೆ ಸ್ಥಳಾಂತರಿಸಬೇಕು’ ಎಂಬ ಸೂಚನೆಯೂ ಆ ಬೆದರಿಕೆಯ ಸಂದೇಶದಲ್ಲಿದೆ.
ಇದರೊAದಿಗೆ ವಿವಿಧ ರಾಜಕೀಯ ವಿಷಯ, ಮಾಧ್ಯಮಗಳ ನಿರ್ವಹಣೆ ಸೇರಿ ಇನ್ನಿತರ ವಿಷಯಗಳ ಬಗ್ಗೆ ಇಮೇಲ್ ಮೂಲಕ ಬರೆಯಲಾಗಿದೆ. ಬಾಂಬ್ ಬೆದರಿಕೆ ಹಿನ್ನಲೆ ಕೋರ್ಟಿನ ಕಲಾಪವನ್ನು ಕೆಲ ಕಾಲ ಮುಂದೂಡಲಾಗಿದ್ದು, ಆವರಣದಲ್ಲಿ ಆತಂಕದ ವಾತಾವರಣ ಕಾಣಿಸಿತು. ವಿವಿಧ ವ್ಯಕ್ತಿಗಳ ಹೆಸರು ಹಾಗೂ ಕೆಲ ಆರೋಪಗಳು ಇಮೇಲ್ ಸಂದೇಶದಲ್ಲಿದ್ದವು. ಆ ಎಲ್ಲಾ ವಿಷಯದ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕೋರ್ಟ ಆವರಣಕ್ಕೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಆಗಮಿಸಿದ್ದು, ನ್ಯಾಯಾಲಯದಲ್ಲಿದ್ದ ಎಲ್ಲರನ್ನು ಹೊರಕ್ಕೆ ಕಳುಹಿಸಿದರು. ಯಾವುದೇ ಬಾಂಬ್ ಪತ್ತೆಯಾಗದ ಹಿನ್ನಲೆ ಎಲ್ಲರೂ ನಿರಾಳರಾದರು.