ಮುಂಡಗೋಡಿನ ಕಾಡಿನಲ್ಲಿ ಮಹಿಳೆಯೊಬ್ಬರ ಮೃತದೇಹ ಕಾಣಿಸಿದೆ. ಬೆತ್ತಲೆಯಾಗಿ ಬಿದ್ದಿರುವ ದೇಹಕ್ಕೆ ರುಂಡವೇ ಇಲ್ಲದಿರುವುದನ್ನು ನೋಡಿ ಜನ ಹೌಹಾರಿದ್ದಾರೆ.
ಮುಂಡಗೋಡದ ಮಳಗಿ ಬಳಿಯ ಕಾಡಿನಲ್ಲಿ ಶುಕ್ರವಾರ ಸಂಜೆ ದೇಹ ಪತ್ತೆಯಾಗಿದೆ. ಮಹಿಳೆಯನ್ನು ಕೊಲೆ ಮಾಡಿ ಕೊಳಗಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಎಸೆದ ಅನುಮಾನವ್ಯಕ್ತವಾಗಿದೆ. ಅಂದಾಜು 35 ವರ್ಷದ ಮಹಿಳೆ ಸಾವನಪ್ಪಿದ್ದು, ಗುರುತು ಪತ್ತೆಯಾಗಿಲ್ಲ. ಎರಡು ದಿನದ ಹಿಂದೆಯೇ ಮಹಿಳೆ ಹತ್ಯೆಯಾಗಿರುವ ಶಂಕೆಯಿದೆ. ಶವ ಕೊಳೆಯುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಆ ಶವ ಯಾರದ್ದು? ಅರಣ್ಯ ಪ್ರದೇಶಕ್ಕೆ ಹೇಗೆ ಬಂದಿತು? ಈ ಸಂಚಿನ ಹಿಂದಿರುವವರು ಯಾರು? ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸಂಜೆ ವೇಳೆ ಶವ ಕಾಣಿಸಿದ್ದರಿಂದ ಸ್ಥಳದಲ್ಲಿ ಕತ್ತಲು ಆವರಿಸಿದ್ದು, ಸದ್ಯದ ಮಟ್ಟಿಗೆ ಕಾರ್ಯಾಚರಣೆಗೆ ಕೊಂಚ ಹಿನ್ನಡೆಯಾಗಿದೆ. ಬೆಳಕಿನ ವ್ಯವಸ್ಥೆ ಮಾಡಿದ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ಶುರು ಮಾಡಿದ್ದಾರೆ.