ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಕರ್ನಾಟಕ ಒನ್ ಕೇಂದ್ರ ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಭಟ್ಕಳ ಪುರಸಭೆ, ದಾಂಡೇಲಿ ನಗರಸಭೆ, ಹಳಿಯಾಳ ಪುರಸಭೆ, ಕಾರವಾರ ನಗರಸಭೆ, ಮಂಕಿ ಪಟ್ಟಣ ಪಂಚಾಯತ, ಶಿರಸಿ ನಗರಸಭೆ ಸೇರಿ 6 ಕಡೆ ಹೊಸದಾಗಿ 10 ಕರ್ನಾಟಕ ಒನ್ ಕೇಂದ್ರ ಅನುಷ್ಠಾನಕ್ಕೆ ಸರ್ಕಾರ ಆಸಕ್ತಿವಹಿಸಿದೆ. ಇಲ್ಲಿನ ಸ್ಥಳೀಯ ನಗರ ಸಂಸ್ಥೆಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ಆರಂಭಿಸಲು ಯೋಗ್ಯ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಇದಕ್ಕಾಗಿ ಅರ್ಹ ಪ್ರಾಂಚೈoಸಿಗಳಿoದ ಅರ್ಜಿ ಆಹ್ವಾನಿಸಲಾಗಿದೆ.
ಆಧಾರ್ ಕಾರ್ಡ, ರೇಶನ್ ಕಾರ್ಡ, ಪಹಣಿ ಪತ್ರಿಕೆ ವಿತರಣೆ, ವಿವಿಧ ಬಿಲ್ ಪಾವತಿ ಸೇರಿ ಸರ್ಕಾರಿ ಸಹಭಾಗಿತ್ವದಲ್ಲಿ ಸಾರ್ವಜನಿಕ ಸೇವೆ ಮಾಡಲು ಕೇಂದ್ರ ಸಹಕಾರಿಯಾಗಿದೆ. ನಿರುದ್ಯೋಗಿಗಳಿಗೆ ಈ ಕೇಂದ್ರ ಆದಾಯವನ್ನು ತಂದುಕೊಡಲಿದ್ದು, ಆಸಕ್ತರು ಮಾರ್ಚ 2ರ ಒಳಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ತಹಶೀಲ್ದಾರ್ ಕಚೇರಿ ಮೂಲಕವೂ ಹೆಚ್ಚಿನ ಮಾಹಿತಿ ಲಭ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಹೇಳಿದ್ದಾರೆ. ಇನ್ನಷ್ಟು ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ: https://www.karnatakaone.gov.in/Public/FranchiseeTerms