ಶಿವರಾತ್ರಿ ದಿನ ಗೋಕರ್ಣದ ಜಾತ್ರೆ ಪೇಟೆಗೆ ಹೋಗಿದ್ದ ಮಹಾದೇವಿ ಮಾರಿಗೋಳಿ ಅವರು ತಮ್ಮ ಕೈಯಲ್ಲಿದ್ದ ಚಿನ್ನದ ಬಳೆಯನ್ನು ಕಾಣೆ ಮಾಡಿಕೊಂಡಿದ್ದಾರೆ. ಅವರು ಗಾಜಿನ ಬಳೆ ಖರೀದಿಸುವ ವೇಳೆ ಕಳ್ಳರು ಕೈ ಚಳಕ ಪ್ರದರ್ಶಿಸಿ ಚಿನ್ನದ ಬಳೆ ಅಪಹರಿಸಿದ ಅನುಮಾನವ್ಯಕ್ತವಾಗಿದೆ.
ಗೋಕರ್ಣದ ಕೋಟಿತೀರ್ಥದ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಮಹಾದೇವಿ ಸದಾಶಿವ ಮಾರಿಗೋಳಿ (75) ಅವರು ವಾಸವಾಗಿದ್ದಾರೆ. ಫೆ 18ರಂದು ಶಿವರಾತ್ರಿ ಅಂಗವಾಗಿ ಅವರು ಜಾತ್ರೆ ಪೇಟೆಗೆ ಹೋಗಿದ್ದರು. ರಥಬೀದಿಯಲ್ಲಿ ತಿರುಗಾಟ ಮುಗಿಸಿದ ನಂತರ ಅವರು ವೆಂಕಟ್ರಮಣ ದೇವಸ್ಥಾನದ ಎದುರಿನ ಬಳೆ ಅಂಗಡಿ ಬಳಿ ಬಂದರು.
ಅಲ್ಲಿ ಬಳೆ ಹಾಗೂ ಅರಶಿನ ಖರೀದಿಗೆ ಮುಂದಾದಾಗ ಅವರ ಎಡಗೈಯಲ್ಲಿರುವ ಎರಡು ಬಳೆ ಕಾಣಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಆ ಬಳೆಗಳು ಸಿಗಲಿಲ್ಲ. 14 ಗ್ರಾಂ ತೂಕದ ಆ ಬಳೆಗಳು 75 ಸಾವಿರ ರೂ ಮೌಲ್ಯದ್ದಾಗಿದ್ದವು. ಆ ಬಳೆ ಕದ್ದ ಕಳ್ಳರಿಗೆ ಶಾಪ ಹಾಕಿದ ಮಹಾದೇವಿ ಮಾರಿಗೋಳಿ ಅವರು ಕಳ್ಳರ ಪತ್ತೆಗಾಗಿ ಪೊಲೀಸರ ಮೊರೆ ಹೋದರು.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಜ್ಜಿಯ ಬಳೆ ಕದ್ದವರಿಗಾಗಿ ಹುಡುಕಾಟ ನಡೆಸಿದ್ದಾರೆ.