ಶಾಲಾ ವಲಯದ ರಸ್ತೆಯಲ್ಲಿ ಸೂಚನಾ ಫಲಕ ಅಳವಡಿಸುವುದು ಹಾಗೂ ಅಗತ್ಯವಿದ್ದಲ್ಲಿ ಹಂಪ್ ಅಳವಡಿಸುವ ವಿಷಯವಾಗಿ ಕುಮಟಾದ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಹೋರಾಟ ಮುಂದುವರೆಸಿದ್ದು, ಇದೇ ವಿಷಯವಾಗಿ ಇದೀಗ ಹೋರಾಟಗಾರರು ಹೈಕೋರ್ಟ ಮೊರೆ ಹೋಗಿದ್ದಾರೆ.
ಕುಮಟಾ ತಾಲೂಕಿನ ಜನತಾ ಫ್ಲೋಟ್ ಮಾಸೂರ್ ಕ್ರಾಸ್‌ನ ಅಘನಾಶಿನಿ ತಲುಪುವ ರಸ್ತೆಯಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಈ ಮಾರ್ಗದಲ್ಲಿ ಶಾಲೆಯೂ ಇದ್ದು, ನಿತ್ಯ ನೂರಾರು ಮಕ್ಕಳು ಸಂಚರಿಸುತ್ತಾರೆ. ಅತ್ಯಧಿಕ ರೆಸಾರ್ಟ ಸಹ ಈ ಮಾರ್ಗದಲ್ಲಿರುವುದರಿಂದ ವಾಹನಗಳ ಓಡಾಟವೂ ಹೆಚ್ಚಾಗಿದೆ. ಹೀಗಾಗಿ ಶಾಲೆಯ ಬಳಿ ಸೂಚನಾ ಫಲಕ ಅಳವಡಿಸುವುದರ ಜೊತೆ ವಾಹನದ ವೇಗ ನಿಯಂತ್ರಿಸಲು ಹಂಪ್ ಅಳವಡಿಸಬೇಕು ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರ ಮಾತ್ರ ಇದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.
ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಯಾವುದೇ ಕ್ರಮವಾಗದ ಕಾರಣ ಮಂಗಳವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಬೆಂಗಳೂರು ಹೈಕೋರ್ಟ ಅಧೀನದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಈ ಬಗ್ಗೆ ಪತ್ರ ರವಾನಿಸಿದ್ದಾರೆ. ರಸ್ತೆ ವಿಷಯವಾಗಿ ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ, ಮುಖ್ಯಮಂತ್ರಿ-ಸಚಿವರು ಸೇರಿ ಹಲವು ಹಂತದಲ್ಲಿ ಬರೆದ ಪತ್ರದ ದಾಖಲೆಗಳನ್ನು ಅವರು ರವಾನಿಸಿದ್ದಾರೆ. ಕಳೆದ ವರ್ಷ ಇಲ್ಲಿ ನಡೆದ ಅಪಘಾತದಲ್ಲಿ ಶಿಕ್ಷಕರೊಬ್ಬರು ಸಾವನಪ್ಪಿದನ್ನು ಉಲ್ಲೇಖಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಪ್ರಮುಖರಾದ ರಾಜಮ್ಮ ನಾಯರ್, ಗಫುರ್ ಸಾಬ್, ಮುನ್ನಾ ಸಾಬ್, ಸಂಜಯ ಬಾಡ್ಕರ್ ಮೊದಲಾದವರು ಈ ವೇಳೆ ಇದ್ದರು.
Discussion about this post