ಮುರುಡೇಶ್ವರ ಕಡಲತೀರದಲ್ಲಿ ಸಣ್ಣ ದಾಡಿ ಬಿಟ್ಟ ತೆಳ್ಳಗಿನ ವ್ಯಕ್ತಿ ಅನಗತ್ಯವಾಗಿ ಕಡಲತೀರದ ಬಳಿ ಅಲೆದಾಡುತ್ತಿದ್ದು, ಆತನೇ ಗಾಂಜಾ ಮಾರಾಟಗಾರ ಎಂಬುದು ಪೊಲೀಸರಿಗೂ ಗೊತ್ತಿದೆ. ಆದರೆ, ಪೊಲೀಸರ ಬಲೆಗೆ ಮಾತ್ರ ಆತ ಬೀಳುತ್ತಿಲ್ಲ!
Advertisement. Scroll to continue reading.
ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಗಾಂಜಾ ಘಾಟು ಜೋರಾಗಿದೆ. ಅಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಪೊಲೀಸರನ್ನು ಯಾಮಾರಿಸುತ್ತಿದ್ದು, ಹೋಗಿ ಬರುವವರಿಗೆ ಗಾಂಜಾ ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಆತ ಗಾಂಜಾ ಮಾರಾಟದಲ್ಲಿ ತೊಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪ್ರತಿ ದಿನ ಮಧ್ಯಾಹ್ನ 12.30ರಿಂದ 1.30ರವರೆಗೆ ಕಡಲತೀರದಲ್ಲಿ ಅಲೆದಾಡುವ ಆ ಅಪರಿಚಿತ ಪೊಲೀಸರು ಬಂದ ತಕ್ಷಣ ಪರಾರಿಯಾಗುತ್ತಿದ್ದು, ಆತನನ್ನು ಬಂಧಿಸುವುದೇ ಸವಾಲಾಗಿದೆ. ಸಂಜೆ 6ರಿಂದ 7ಗಂಟೆ ಅವಧಿಯಲ್ಲಿಯೂ ಆ ಪರಿಚಿತ ಮತ್ತೆ ಆಗಮಿಸಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದರೂ ಆತ ಸಿಕ್ಕಿ ಬೀಳುತ್ತಿಲ್ಲ.
ಮುರುಡೇಶ್ವರ ಕಡಲತೀರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗಾಂಜಾ ಮಾರುತ್ತಿರುವ ಬಗ್ಗೆ ಅರಿತು ಪೊಲೀಸ್ ವೃತ್ತ ನಿರೀಕ್ಷಕ ಜಗದೀಶ ಹಂಚನಾಳ ಅವರು ಪ್ರಕರಣವನ್ನು ದಾಖಲಿಸಿದ್ದಾರೆ. ಆ ವ್ಯಕ್ತಿ ಗಾಂಜಾ ಮಾದಕ ವಸ್ತುವನ್ನು ಸಣ್ಣ ಸಣ್ಣ ಪ್ಯಾಕೇಟಗಳಲ್ಲಿ ಹಾಕಿ ಮುರುಡೇಶ್ವರದ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯ ಕೆಲವು ವ್ಯಕ್ತಿಗಳಿಗೆ ನೀಡುತ್ತಿದ್ದು, ಒಂದು ಪ್ಯಾಕೇಟಗೆ 500 ರೂಪಾಯಿ ಪಡೆಯುವ ಬಗ್ಗೆ ಮಾಹಿತಿಯಿದೆ. ಈ ಹಿನ್ನಲೆ ಆ ಅಪರಿಚಿತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
`ಮಾದಕ ವ್ಯಸನ ಮಾರಾಟ ಗಂಭೀರ ಅಪರಾಧ’